ತುಮಕೂರು: ದನ ಮೇಯಿಸಲು ಬೆಟ್ಟಕ್ಕೆ ತೆರಳಿದ್ದ ಮಹಿಳೆಯ ಕೊಲೆ
Update: 2021-08-25 11:33 IST
ತುಮಕೂರು, ಆ.25: ದನ ಮೇಯಿಸಲು ಬೆಟ್ಟಕ್ಕೆ ಹೋಗಿದ್ದ ಮಹಿಳೆಯೊಬ್ಬರನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಚೋಟ ಸಾಬರ ಪಾಳ್ಯ ಎಂಬಲಲ್ಲಿ ನಡೆದಿದೆ.
ಚೋಟ ಸಾಬರ ಪಾಳ್ಯದ ಬಳಿ ನಿವಾಸಿ ಶಿವಕುಮಾರ್ ಎಂಬವರ ಪತ್ನಿ ಕೊಲೆಯಾದವರು. ಇವರು ಎಂದಿನಂತೆ ಬೆಟ್ಟಕ್ಕೆ
ನಿನ್ನೆಯೂ ಸಹ ದನ ಮೇಯಿಸಲು ಚೋಟ ಸಾಬರ ಪಾಳ್ಯದ ಬಳಿಯಿರುವ ಬೆಟ್ಟಕ್ಕೆ ತೆರಳಿದ್ದರೆನ್ನಲಾಗಿದೆ. ಸಂಜೆಯಾದರೂ ಅವರು ಮನೆಗೆ ವಾಪಸ್ ಬರದಿದ್ದಾಗ ಪತಿ ಶಿವಕುಮಾರ್ ಹುಡುಕಿಕೊಂಡು ಹೋಗಿದ್ದು, ಈ ವೇಳೆ ಮೃತದೇಹ ಪತ್ತೆಯಾಗಿದೆ. ಮಂಗಳವಾರ ಮಧ್ಯಾಹ್ನ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ತನಿಖೆ ಮುಂದುವರಿದಿದೆ.