×
Ad

ಮೈಸೂರು: ಲಂಚ ಪ್ರಕರಣ; ಶಾಲಾ ವಾರ್ಡನ್‍ಗೆ 3 ವರ್ಷ ಜೈಲು ಶಿಕ್ಷೆ

Update: 2021-08-25 17:39 IST

ಮೈಸೂರು: ಲಂಚ ಸ್ವೀಕರಿಸಿದ ಪ್ರಕರಣವೊಂದರಲ್ಲಿ ಶಾಲಾ ವಾರ್ಡನ್‍ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ.

ಗಣಪತಿ ಜಕಾತಿ ಎಂಬ ಶಾಲಾ ವಾರ್ಡನ್‍ಗೆ ಶಿಕ್ಷೆ ವಿಧಿಸಿ ಮೈಸೂರಿನ 3ನೇ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆರಾಲ್ಡ್ ಆರ್ ಮೆಂಡೋನ್ಸ್ ತೀರ್ಪು ನೀಡಿದ್ದಾರೆ.

ಸರ್ಕಾರಿ ವಿಶೇಷ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ಅವರು ಗೋಳೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ವಿರುದ್ಧ ವಾದ ಮಂಡಿಸಿದ್ದರು.

ನಂಜನಗೂಡು ತಾಲ್ಲೂಕಿನ ಗೋಳೂರಿನ ಹಾಸ್ಟೆಲ್‍ಗೆ ಎಲೆಕ್ಟ್ರಾನಿಕ್ ಉಪಕರಣ ರಿಪೇರಿ ಶುಲ್ಕ ನೀಡಲು ವಾರ್ಡನ್ ಗಣಪತಿ ಜಕಾತಿ ಲಂಚ ಕೇಳಿದ್ದರು. ಆ ಸಂಬಂಧ 2 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News