×
Ad

ಶಿವಮೊಗ್ಗ: ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

Update: 2021-08-25 18:49 IST

ಶಿವಮೊಗ್ಗ,ಆ.25: ಬೆಲೆ ಏರಿಕೆ ಖಂಡಿಸಿ ಅಶೋಕ ನಗರ ವಾರ್ಡ್ ವ್ಯಾಪ್ತಿಗೆ ಬರುವ ಬಿಜೆಪಿ ಬೂತ್‌ನ ಅಧ್ಯಕ್ಷ ಶೇಖರ್ ಅವರು ನಾಮಫಲಕ ತಿರಸ್ಕರಿಸಿ ಸ್ಥಳದಲ್ಲೇ ರಾಜೀನಾಮೆ ನೋಡಿದ ಘಟನೆ ಬುಧವಾರ ನಡೆದಿದೆ.

ಬುಧವಾರ ಬೆಳಿಗ್ಗೆ 26ನೇ ವಾರ್ಡ್‌ನ 199ನೇ ಬೂತ್ ಅಧ್ಯಕ್ಷರಾಗಿರುವ ಶೇಖರ್ ಅವರು ಆ ವಾರ್ಡ್‌ನ ಅಧ್ಯಕ್ಷರಿಗೆ ದಿಡೀರನೇ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಈ ಘಟನೆಯಿಂದ ಬಿಜೆಪಿ ಮುಖಂಡರಲ್ಲಿ ಇರುಸು-ಮುರುಸು ಉಂಟಾಗಿದೆ. ಕಳೆದ ಕೆಲ ದಿನದಿಂದ ಬಿಜೆಪಿ ಸಚಿವರು ಶಾಸಕರು ವಾರ್ಡ್‌ನ ಅಧ್ಯಕ್ಷರುಗಳೇ ಹೋಗಿ ನಾಮಫಲಕ ವಿತರಿಸುತ್ತಿದ್ದರು.

ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿಯಿಂದ ಅಭಿವೃದ್ಧಿಯ ಭರವಸೆ ನೀಡಲಾಗಿತ್ತು ಆದರೆ ಈಗ ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟಕ್ಕೆ ಸಿಲುಕಿದೆ ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬೂತ್ ಅಧ್ಯಕ್ಷ ಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News