×
Ad

ಬಿಜೆಪಿ ಪ್ರಣಾಳಿಕೆಯಲ್ಲಿದ್ದಂತೆ 'ಇಂದಿರಾ ಕ್ಯಾಂಟೀನ್‍' ಹೆಸರು ಬದಲಾವಣೆ: ಸಿಟಿ ರವಿ

Update: 2021-08-25 19:15 IST

ಮಂಡ್ಯ, ಆ.25: 'ಇಂದಿರಾ ಕ್ಯಾಂಟೀನ್‍ಗಳಿಗೆ ಅನ್ನಪೂರ್ಣ ಹೆಸರು ನಾಮಕರಣ ಮಾಡಲು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅದರಂತೆ ಹೆಸರು ಬದಲಾಯಿಸುತ್ತಿದ್ದೇವೆ. ಇಂದಿರಾ ಎಂಬುದು ಒಂದು ಪಕ್ಷದ ವ್ಯಕ್ತಿಯ ಹೆಸರು. ಆದರೆ, ಅನ್ನಪೂರ್ಣ ಎಂಬುದು ನಮ್ಮ ಪಕ್ಷದ ವ್ಯಕ್ತಿಯ ಹೆಸರಲ್ಲ' ಎಂದು ಅವರು ಹೇಳಿದರು.

ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅವರು, 'ನಾನು ಮೇಕೆದಾಟು ಯೋಜನೆ ವಿರುದ್ಧ ಇಲ್ಲ. ಕಾಂಗ್ರೆಸ್‍ನವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದು ಕುಡಿಯುವ ನೀರಿನ ಯೋಜನೆಯಾಗಿದ್ದು, ಯಾವುದೇ ತೊಂದರೆ ಆಗುವುದಿಲ್ಲವೆಂದು ತಮಿಳುನಾಡು ಜನರಲ್ಲಿರುವ ಆತಂಕ ನಿವಾರಣೆ ಮಾಡಬೇಕಾಗಿದೆ' ಎಂದು ಅವರು ಪ್ರತಿಕ್ರಿಯಿಸಿದರು. 

'ಕೆಲವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ಕೊಡಲೇಬೇಕಿತ್ತು. ಹಾಗಾಗಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಗಳು ಜನರ ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ಆಡಳಿತ ನಡೆಸಿದರೆ ಜನರು ಸಂತೃಪ್ತರಾಗುತ್ತಾರೆ. ಜತೆಗೆ, ಪಕ್ಷದ ಬೆಳವಣಿಗೆಯೂ ಆಗುತ್ತದೆ' ಎಂದು ಅವರು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News