×
Ad

ಶಾಸಕ ಝಮೀರ್ ಅಹ್ಮದ್ ಗೆ ಬೆದರಿಕೆ ಆರೋಪ: ಜೆಡಿಎಸ್ ಕಾರ್ಯಕರ್ತನ ವಿರುದ್ಧ ದೂರು ದಾಖಲು

Update: 2021-08-25 20:35 IST

ಬೆಂಗಳೂರು, ಆ.25: ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್‍ಗೆ ಕೊಲೆ ಬೆದರಿಕೆವೊಡ್ಡಿರುವ ಆರೋಪ ಸಂಬಂಧ ಜೆಡಿಎಸ್ ಕಾರ್ಯಕರ್ತನ ಮೇಲೆ ಇಲ್ಲಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಜೆಡಿಎಸ್ ಕಾರ್ಯಕರ್ತ ನರಸಿಂಹಮೂರ್ತಿ ಎಂಬಾತನ ವಿರುದ್ಧ ಪೊಲೀಸರು ಮಾಹಿತಿ ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಆರೋಪಿ ನರಸಿಂಹಮೂರ್ತಿ, ಎಚ್‍ಡಿಕೆ ಗಜಪಡೆ ಎಂಬ ಫೇಸ್‍ಬುಕ್ ಖಾತೆಯಿಂದ ವಿಡಿಯೊ ಅನ್ನು ಹರಿಬಿಟ್ಟು ಝಮೀರ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಇದರನ್ವಯ ನವೀನ್ ಗೌಡ ಎಂಬಾತ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News