×
Ad

ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರ

Update: 2021-08-26 23:19 IST

ಬೆಂಗಳೂರು, ಆ.26: ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ಅನ್ನು ಸಿಐಡಿಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ.

ಇಲ್ಲಿನ ಹನುಮಂತನಗರ ಠಾಣೆ ಪೊಲೀಸರು ಸಿಐಡಿಗೆ ಇಂದು ಅಧಿಕೃತವಾಗಿ ಪ್ರಕರಣದ ತನಿಖೆಯನ್ನು ಮುಂದುವರೆಸುವಂತೆ ಹಸ್ತಾಂತರಿಸಿದರು. ಇದಕ್ಕೂ ಮೊದಲು ಗಂಭೀರ ಸ್ವರೂಪ ಪಡೆದು ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಡಿಜಿ ಮತ್ತು ಐಜಿಪಿ ಆದೇಶಿಸಿದ್ದರು.

ಆದೇಶದಂತೆ ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್ ನಡೆದ ವಂಚನೆ ಪ್ರಕರಣದ ತನಿಖೆ ಜವಾಬ್ದಾರಿಯೂ ಸಿಐಡಿ ಆರ್ಥಿಕ ಅಪರಾಧ ತನಿಖಾದಳ ಹೊತ್ತಿದೆ.

ಏನಿದು ಪ್ರಕರಣ?: ಹತ್ತು ವರ್ಷಗಳಿಂದ ಈ ಸೊಸೈಟಿ ಚಾಲ್ತಿಯಲ್ಲಿದ್ದು, ಅದರ ನಂಬಿಕೆ ಆಧಾರದ ಮೇಲೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿಗಳನ್ನು ಇರಿಸಿದ್ದರು. ಆದರೆ, ಕೋ-ಆಪರೇಟಿವ್ ಬ್ಯಾಂಕಿನ ಪ್ರಮುಖರು ವಂಚನೆಗೈದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News