'ನಾನು ಪೇಪರ್ ಓದಲ್ಲ, ಮೈಸೂರು ವಿಚಾರ ನನಗೆ ಗೊತ್ತಿಲ್ಲ' ಎಂದ ಸಂಸದ ಜಿ.ಎಂ.ಸಿದ್ದೇಶ್ವರ
Update: 2021-08-27 19:27 IST
ದಾವಣಗೆರೆ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಇದೀಗ 'ನಾನು ಪೇಪರ್ ಓದಲ್ಲ. ಮೈಸೂರ ವಿಚಾರ ನನಗೆ ಗೊತ್ತಿಲ್ಲ' ಎಂದು ಹೇಳುವ ಮೂಲಕ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ''ದಾವಣಗೆರೆ ಬಗ್ಗೆ ಕೇಳಿ ಬೇಕಾದ್ರೆ ಹೇಳೋಣ. ಮೈಸೂರಿನ ವಿಚಾರ ನನಗೇನು ಗೊತ್ತು, ನಾನೇನು ನೋಡಿದ್ದೀನಾ?. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದ ಅವರು, ನಾನು ಬೆಳಿಗ್ಗೆ ಮನೆಯಿಂದ ಹೊರಟರೆ ರಾತ್ರಿ ಹನ್ನೊಂದಕ್ಕೆ ಮನೆ ಸೇರುವುದು. ಹೀಗಾಗಿ ಪೇಪರ್ ಓದೋದಕ್ಕೂ ನನಗೆ ಆಗಲ್ಲ. ಮೈಸೂರು ವಿಚಾರನೂ ನನಗೆ ಗೊತ್ತಿಲ್ಲ'' ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.