`ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ': ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಟೀಕೆ
ಬೆಂಗಳೂರು, ಆ. 27: `ಕಾಂಗ್ರೆಸ್ ಸರಕಾರವಿರುವಾಗ ಎಲ್ಲಿಯೇ ಕೊಲೆ ನಡೆಯಲಿ, ಸುಲಿಗೆ ನಡೆಯಲಿ, ಅತ್ಯಾಚಾರ ನಡೆಯಲಿ ಅಲ್ಲಿಗೆ ರಣಹದ್ದುಗಳಂತೆ ಹಾರಿಬಂದು ಸರಕಾರವೇ ಕಾರಣವೆಂದು ಎಗರಿ ಬೀಳುತ್ತಿದ್ದಿರಲ್ಲ ಶೋಭಾ ಕರಂದ್ಲಾಜೆ ಅವರೇ,
ಉತ್ತರದಾಯಿತ್ವದ ಸ್ಥಾನ ಸಿಕ್ಕಮೇಲೆ ಬಾಯಿ ಮುಚ್ಚಿಕೊಳ್ಳುವ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಪ್ರವಾಸಿ ತಾಣದ ಬಳಿಯೇ ಪೊಲೀಸ್ ರಕ್ಷಣೆ ಇಲ್ಲದಿರುವುದು ಒಂದು ವೈಫಲ್ಯವಾದರೆ, ಮೂರು ದಿನಗಳು ಕಳೆದರೂ ಆರೋಪಿಗಳನ್ನು ಹಿಡಿಯಲಾಗದ್ದು ಮತ್ತೊಂದು ವೈಫಲ್ಯ. ತಮ್ಮ ವೈಫಲ್ಯ ಮರೆಮಾಚಲು ರಮೇಶ್ ಜಾರಕಿಹೊಳಿ ಪ್ರಕರಣದ ಸಂತ್ರಸ್ತೆಯಂತೆ ಈ ಸಂತ್ರಸ್ತೆಯನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ ದುಷ್ಟ ಬಿಜೆಪಿ ಸರಕಾರ' ಎಂದು ಟೀಕಿಸಿದೆ.
`ಬಿಜೆಪಿಯವರು ಬಡ ಮಕ್ಕಳ ಮೊಟ್ಟೆ ತಿನ್ನಬಹುದು, ಬಿಜೆಪಿಯವರು ಬಡಮಕ್ಕಳ ಸ್ವೆಟರ್ ನುಂಗಬಹುದು, ಬಿಜೆಪಿಯವರು ಬಳ್ಳಾರಿಯ ಮಣ್ಣು, ಬೆಂಗಳೂರಿನ ನೆಲವನ್ನ ತಿನ್ನಬಹುದು, ಬಿಜೆಪಿಯವರು ಲೂಟಿಯ ಹಣ ತಿನ್ನಬಹುದು, ಬಿಜೆಪಿಯ ಉಮೇಶ್ ಕತ್ತಿ ಸದನದಲ್ಲಿ ಗುಟ್ಕಾ ತಿನ್ನಬಹುದು. ಆದರೆ, ಬಡಜನತೆ ಮಾತ್ರ 5 ಕೆಜಿಗಿಂತ ಹೆಚ್ಚು ಅಕ್ಕಿ ತಿನ್ನಬಾರದು!!' ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
`ಯಾರದ್ದೋ `ಸಂತೋಷ'ಕ್ಕಾಗಿ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು 2 ವರ್ಷದಲ್ಲಿ ಮಾಡಿದ ಸಾಧನೆ ನಾಲ್ಕೇ! ನಿರಂತರವಾಗಿ ಬಿಎಸ್‍ವೈ ಅವರ ವಿರುದ್ಧ ಶಾಸಕರನ್ನು ಎತ್ತಿಕಟ್ಟಿದ್ದು, ಷಡ್ಯಂತ್ರ ರೂಪಿಸಿ ಬಿಎಸ್‍ವೈ ಅವರ ರಾಜೀನಾಮೆ ಕೊಡಿಸಿದ್ದು, ಜಗದೀಶ್ ಶೆಟ್ಟರ್ ಅವರನ್ನ ಮನೆಗೆ ಕಳಿಸಿದ್ದು, ಕೆ.ಎಸ್.ಈಶ್ವರಪ್ಪ ಅವರನ್ನ ಮೂಲೆಗೆ ತಳ್ಳಿದ್ದು!'
ಕಾಂಗ್ರೆಸ್ ಸರ್ಕಾರವಿರುವಾಗ ಎಲ್ಲಿಯೇ ಕೊಲೆ ನಡೆಯಲಿ, ಸುಲಿಗೆ ನಡೆಯಲಿ, ಅತ್ಯಾಚಾರ ನಡೆಯಲಿ ಅಲ್ಲಿಗೆ ರಣಹದ್ದುಗಳಂತೆ ಹಾರಿಬಂದು ಸರ್ಕಾರವೇ ಕಾರಣವೆಂದು ಎಗರಿ ಬೀಳುತ್ತಿದ್ದಿರಲ್ಲ @ShobhaBJP ಅವರೇ,
— Karnataka Congress (@INCKarnataka) August 27, 2021
ಉತ್ತರದಾಯಿತ್ವದ ಸ್ಥಾನ ಸಿಕ್ಕಮೇಲೆ ಬಾಯಿ ಮುಚ್ಚಿಕೊಳ್ಳುವ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!#JusticeForMysuruVictim pic.twitter.com/ljaxYVEfB8