ರಾಜ್ಯಾದ್ಯಂತ ವಾರದಲ್ಲೊಂದು ದಿನ ಲಸಿಕೆ ಉತ್ಸವ: ಸಚಿವ ಡಾ.ಸುಧಾಕರ್
Update: 2021-08-29 10:37 IST
ಚಿಕ್ಕಬಳ್ಳಾಪುರ, ಆ.29: ರಾಜ್ಯಾದ್ಯಂತ ವಾರದಲ್ಲಿ ಒಂದು ದಿನ ಕೋವಿಡ್ ಲಸಿಕೆ ಉತ್ಸವ ಆಯೋಜಿಸಲಾಗುವುದು. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಚಾಲನೆ ನೀಡುವರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಸಾದಲಿ ಎಂಬಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರತಿನಿತ್ಯ ಕನಿಷ್ಠ 5 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಅದೇರೀತಿ ವಾರದಲ್ಲಿ ಒಂದು ದಿನ ಲಸಿಕೆ ಉತ್ಸವ ಸಂಘಟಿಸಿ ಅಂದು 15ರಿಂದ 20 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಆ.27ರವರೆಗೆ ಒಟ್ಟು 4 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.