×
Ad

ಜಮಖಂಡಿ: ಆಸ್ತಿ ವಿಚಾರಕ್ಕೆ ನಾಲ್ವರು ಸಹೋದರರ ಕೊಲೆ ಪ್ರಕರಣ; 9 ಮಂದಿ ಬಂಧನ

Update: 2021-08-29 17:19 IST

ಬಾಗಲಕೋಟೆ, ಆ. 29: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಸಹೋದರರನ್ನು ಕೊಲೆಗೈದ ಪ್ರಕರಣದಲ್ಲಿ ಒಂಭತ್ತು ಜನರನ್ನು ಇಲ್ಲಿನ ಜಮಖಂಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮದರಖಂಡಿಯಲ್ಲಿ ಭೂಮಿ ವಿವಾದದ ಹಿನ್ನೆಲೆಯಲ್ಲಿ ಶನಿವಾರ ನಾಲ್ವರು ಸಹೋದರರನ್ನು ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಏನಿದು ವಿವಾದ?: ಮದರಖಂಡಿಯ ಸುಮಾರು 3 ಎಕರೆ 21 ಗುಂಟೆ ಜಮೀನಿಗಾಗಿ ಮದರಖಂಡಿ ಮತ್ತು ಪುಟಾಣಿ ಎರಡು ಕುಟುಂಬಗಳ ನಡುವಿನ ವಿವಾದವಿತ್ತು. ಇದೇ ವಿಚಾರವಾಗಿ ಶನಿವಾರ ರಾತ್ರಿ ಮುದರಡ್ಡಿ(ಉದಗಟ್ಟಿ) ಕುಟುಂಬದ ಸಹೋದರರಾದ ಹನುಮಂತ ಮಹಾದೇವ ಮುದರಡ್ಡಿ(45), ಮಲ್ಲಪ್ಪ(42) ಬಸಪ್ಪ(37) ಹಾಗೂ ಈಶ್ವರ(35)ಕೊಲೆ ಮಾಡಲಾಗಿತ್ತು.

ಸದ್ಯ ಪುಟಾಣಿ ಕುಟುಂಬದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ ಒಟ್ಟು 12 ಮಂದಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News