ಬೆಂಗಳೂರು-ಹುಬ್ಬಳ್ಳಿ ನಡುವೆ ವಾರಾಂತ್ಯ ವಿಶೇಷ ರೈಲು
ಬೆಂಗಳೂರು, ಆ. 29: ನೈಋತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಯಶವಂತಪುರ-ಹುಬ್ಬಳ್ಳಿ ನಡುವೆ ವಾರಾಂತ್ಯದ ವಿಶೇಷ ರೈಲನ್ನು ಓಡಿಸುತ್ತಿದೆ. ಸೆ.3ರಂದು ವಿಶೇಷ ರೈಲು ಬೆಂಗಳೂರಿನಿಂದ ಹೊರಡಲಿದೆ.
ಪ್ರತಿ ಶುಕ್ರವಾರ ಮತ್ತು ಶನಿವಾರ ವಿಶೇಷ ರೈಲು ಸಂಚಾರ ನಡೆಸುತ್ತಿದೆ. ಬೆಂಗಳೂರಿನ ಯಶವಂತರಪುರದಿಂದ ರೈಲು ಸೆ.3ರಂದು 11.50ಕ್ಕೆ ಹೊರಡಲಿದೆ. ಹುಬ್ಬಳ್ಳಿಯಿಂದ ಸೆ. 4ರಂದು ರಾತ್ರಿ 7.35ಕ್ಕೆ ವಿಶೇಷ ರೈಲು ಹೊರಡಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಶವಂತಪುರದಿಂದ ಹೊರಡುವ ರೈಲು ತುಮಕೂರು, ಅರಸೀಕೆರೆ ಜಂಕ್ಷನ್, ದಾವಣಗೆರೆ, ಹರಿಹರ, ಹಾವೇರಿ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಬೆಂಗಳೂರು-ಚಾಮರಾಜನಗರ ರೈಲು ನೈಋತ್ಯ ರೈಲ್ವೆ ಕೆಎಸ್‍ಆರ್ ಬೆಂಗಳೂರು-ಚಾಮರಾಜನಗರ ನಡುವೆ ಸೆ.1ರಿಂದ ಕಾಯ್ದಿರಿಸದ ರೈಲನ್ನು ಓಡಿಸಲಿದೆ. ರೈಲಿನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ
ಮೈ-ಚಾಮರಾಜನಗರ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ ಜನರ ಅನುಕೂಲಕ್ಕಾಗಿ ಎರಡು ನಗರಗಳ ನಡುವೆ ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆಯನ್ನು ಸೆ.1ರಿಂದ ಆರಂಭವಾಗಲಿದೆ. ನಿತ್ಯ ಪ್ರಯಾಣಿಸುವವರಿಗೆ ಈ ರೈಲು ಸೇವೆಯಿಂದ ಅನುಕೂಲವಾಗಲಿದೆ. ನೈಋತ್ಯ ರೈಲ್ವೆಯಿಂದ ಇನ್ನೊಂದು ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆ ಯಶವಂತಪುರ ಹಾಗೂ ಸೇಲಂ ನಡುವೆ. ಆ.30ರಿಂದ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.