ಮರಕ್ಕೆ ಬೈಕ್ ಢಿಕ್ಕಿ; ಸವಾರ ಮೃತ್ಯು
Update: 2021-08-29 19:06 IST
ಆನೇಕಲ್: ಬೈಕ್ ಮರಕ್ಕೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುತ್ಯಾಲಮಡುವು ಪ್ರವಾಸಿ ತಾಣದ ಬಳಿ ನಡೆದಿದೆ.
ಮೃತ ಯುವಕ ಅಜಯ್ (24) ಎಂದು ಗುರುತಿಸಲಾಗಿದ್ದು, ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.