ಡ್ಯಾನ್ಸ್‌ ಕಲಿಯಲು ಆಸಕ್ತಿಯಿರುವವರು ಹುಬ್ಬಳ್ಳಿಯ ಗುಂಡಿಬಿದ್ದ ರಸ್ತೆಗಳಿಗೆ ಬನ್ನಿ: ಡಿಕೆಶಿ ವ್ಯಂಗ್ಯ

Update: 2021-08-29 14:08 GMT

ಹುಬ್ಬಳ್ಳಿ, ಆ. 29: `ನೃತ್ಯ (ಡಾನ್ಸ್) ಕಲಿಯುವ ಆಸಕ್ತರು ಹುಬ್ಬಳ್ಳಿ, ಧಾರವಾಡದ ಗುಂಡಿಬಿದ್ದಿರುವ ರಸ್ತೆಗಳಿಗೆ ಬನ್ನಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾನ್ಸ್ ಕಲಿಯಲು ಆಸಕ್ತಿ ಇರುವವರು ಹುಬ್ಬಳ್ಳಿ ಧಾರವಾಡಕ್ಕೆ ಬರಬೇಕು. ಇಲ್ಲಿರುವ ಇಲ್ಲಿನ ಗುಂಡಿಬಿದ್ದಿರುವ ರಸ್ತೆಗಳಲ್ಲಿ ಒಂದು ಸುತ್ತು ಹಾಕಿದರೆ ಸಾಕು, ನೃತ್ಯ ಕಲಿಯಬಹುದು ಎಂದು ನುಡಿದರು.
ಇಲ್ಲಿ ಕಳೆದ ಎರಡು ದಿನಗಳಿಂದ ಓಡಾಡಿದೆ, ಯಾವೊಂದು ರಸ್ತೆಯೂ ಸರಿಯಿಲ್ಲ. ಎಲ್ಲವೂ ಗುಂಡಿಬಿದ್ದು ಹಾಳಾಗಿವೆ ಎಂದ ಅವರು, ಬಿಜೆಪಿ ನಾಯಕರು ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡಿದೆ ಎಂದು ಟೀಕಿಸಿದರು.

ರಿಯಾಯಿತಿ: ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, ಕೋವಿಡ್‍ನಿಂದಾಗಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಗುಜರಾತ್ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಆಸ್ತಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.ಆದರೆ, ರಾಜ್ಯದಲ್ಲಿ ಮಾತ್ರ ಅಂತಹ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News