×
Ad

ಮಂಡ್ಯದಲ್ಲಿ ಎತ್ತಿನ ಗಾಡಿ ಸ್ಪರ್ಧೆಗೆ ಅನುಮತಿ ನೀಡಿದ ಹೈಕೋರ್ಟ್

Update: 2021-09-01 16:50 IST

ಬೆಂಗಳೂರು, ಸೆ.1: ಮಂಡ್ಯದಲ್ಲಿ ಎತ್ತಿನಗಾಡಿ ಸ್ಪರ್ಧೆ ನಡೆಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಸುಪ್ರೀಂಕೋರ್ಟ್ ವಿಧಿಸಿರುವ ಷರತ್ತು ಪಾಲಿಸಲು ಸೂಚಿಸಿದೆ.

ಎತ್ತಿನ ಬಂಡಿ ಸ್ಪರ್ಧೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಮೈಸೂರಿನ ಪ್ರಾಣಿ ಕಲ್ಯಾಣ ಸಂಘ ಹೈಕೋರ್ಟ್‍ಗೆ ಪಿಐಎಲ್ ಸಲ್ಲಿಸಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ರಾಜ್ಯ ಸರಕಾರ ಎತ್ತಿನ ಬಂಡಿ ಸ್ಪರ್ಧೆಗೆ ತನ್ನದೇ ಇತಿಹಾಸ ಹಾಗೂ ಪರಂಪರೆ ಇದೆ. ಸ್ಪರ್ಧೆ ವೇಳೆ ಯಾವುದೇ ಪ್ರಾಣಿ ಹಿಂಸೆ ಆಗುವುದಿಲ್ಲ. ಹೀಗಾಗಿಯೇ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ರಾಜ್ಯ ಸರಕಾರ 2018 ರಲ್ಲಿ ತಿದ್ದುಪಡಿ ತಂದಿದೆ.

ಕಂಬಳ, ಎತ್ತಿನ ಓಟ, ಎತ್ತಿನ ಬಂಡಿ ಸ್ಪರ್ಧೆಗೆ ಅನುಮತಿ ನೀಡಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಿತ್ತು. ಇದಲ್ಲದೇ ಸುಪ್ರೀಂಕೋರ್ಟ್ ಕೂಡಾ ಎತ್ತಿನ ಬಂಡಿ ಸ್ಪರ್ಧೆಗೆ ಷರತ್ತು ವಿಧಿಸಿದ್ದು, ಪ್ರಾಣಿಗಳ ಸಂರಕ್ಷಣೆಗೆ ಆಯೋಜಕರು ಎಲ್ಲ ಕ್ರಮ ಕೈಗೊಳ್ಳಬೇಕು, ಪ್ರಾಣಿಗಳಿಗೆ ನೋವು ಉಂಟುಮಾಡಬಾರದು, ಪ್ರಾಣಿಗಳನ್ನು ಹಿಂಸಾತ್ಮಕ ಹೋರಾಟದಲ್ಲಿ ತೊಡಗಿಸಬಾರದು, ಮಾನವೀಯವಾಗಿ ನಡೆಸಿಕೊಳ್ಳಬೇಕೆಂದು ಷರತ್ತು ವಿಧಿಸಿದೆ. 

ಈ ಷರತ್ತಿಗೆ ಬದ್ಧವಾಗಿ ಎತ್ತಿನ ಬಂಡಿ ಸ್ಪರ್ಧೆ ನಡೆಸಬಹುದೆಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಮೈಸೂರಿನ ಪ್ರಾಣಿ ಕಲ್ಯಾಣ ಸಂಘ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News