×
Ad

ಮದ್ರಸಾಗಳ ಬಗ್ಗೆ ಸಿ.ಟಿ.ರವಿ ಹೇಳಿಕೆ ಅಸಹ್ಯ: ಯು.ಟಿ.ಖಾದರ್

Update: 2021-09-01 20:49 IST

ಬೆಂಗಳೂರು, ಸೆ.1: ಮದ್ರಸಾಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿರುವ ಹೇಳಿಕೆ ಅಸಹ್ಯ ಮತ್ತು ಬೇಜವಾಬ್ದಾರಿ ಹೇಳಿಕೆ. ಮದ್ರಸಾಗಳಲ್ಲಿ ಸಣ್ಣ ಮಕ್ಕಳಿಗೆ ಪವಿತ್ರ ಕುರ್‍ಆನ್ ಪಾರಾಯಣ ಮತ್ತು ಒಳ್ಳೆಯ ನೈತಿಕ ಶಿಕ್ಷಣ ಕಲಿಸಲಾಗುತ್ತದೆ. ಎಲ್ಲ ಮದ್ರಸಾಗಳು ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಯಾವ ಮದ್ರಸಾಗಳೂ ಕಾಡಿನಲ್ಲಿ ನಿಗೂಢವಾಗಿ ಕಾರ್ಯಾಚರಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮದ್ರಸಾಗಳಲ್ಲಿ ಏನು ಕಲಿಸಲಾಗುತ್ತದೆ. ಅವುಗಳ ಸಿಲಬಸ್(ಪಠ್ಯಕ್ರಮ) ಯಾವುದು ಎಂಬುದೆಲ್ಲಾ ಬಹಿರಂಗ ವಿಷಯ. ಅವುಗಳ ಬಗ್ಗೆ ತಿಳಿದು ಮಾತಾಡುವ ವಿವೇಕ ರವಿಯವರಿಗೆ ಇರಬೇಕು. ಹೊಣೆಗಾರರು ಅಸಂಬದ್ಧ ಹೇಳಿಕೆ ನೀಡಬಾರದು. ತಮ್ಮ ನೀಚ ರಾಜಕೀಯಕ್ಕಾಗಿ ಪವಿತ್ರವಾದ ಮದ್ರಸಾಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News