×
Ad

ಬೆಂಗಳೂರು: ತೂಕದ ಯಂತ್ರದಿಂದ ವಂಚನೆ; ಆರೋಪಿಯ ಬಂಧನ

Update: 2021-09-01 23:59 IST

ಬೆಂಗಳೂರು, ಸೆ.1: ರಿಮೋಟ್ ಕಂಟ್ರೋಲ್ ಮೂಲಕ ಗೊತ್ತಾಗದಂತೆ ಡಿಜಿಟಲ್ ತೂಕದ ಯಂತ್ರವನ್ನು ನಿಯಂತ್ರಿಸಿ ಗ್ರಾಹಕರನ್ನು ವಂಚಿಸುತ್ತಿದ್ದ ಆರೋಪಿಯನ್ನು  ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಜಗೋಪಾಲನಗರದ ವಿಘ್ನೇಶ್ವರನ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಗುಜರಿ ತೂಕದ ಯಂತ್ರಕ್ಕೆ ರಿಮೋಟ್ ಅಳವಡಿಸಿಕೊಂಡು ತೂಕ ಹಾಕುವ ವೇಳೆ ರಿಮೋಟ್ ಮೂಲಕ ಐದಾರು ಕೆಜಿ ಕಡಿಮೆ ಮಾಡುತ್ತಿದ್ದ. ಗುಜರಿ ವ್ಯಾಪಾರಿಯ ಮೋಸದ ಬಗ್ಗೆ ತಿಳಿದ ಸಾರ್ವಜನಿಕರು ಅಳತೆ ಮತ್ತು ಮಾಪನ ಇಲಾಖೆಗೆ ದೂರು ನೀಡಿದ್ದರು.

ಈ ಬಗ್ಗೆ ಅಳತೆ ಮತ್ತು ಮಾಪನ ಇಲಾಖೆ ಪರಿಶೀಲಿಸಿದಾಗ ಎಲೆಕ್ಟ್ರಾನಿಕ್ ತೂಕದ ಯಂತ್ರಕ್ಕೆ ರಿಮೋಟ್ ಬಳಸಿ ಮೋಸ ಮಾಡುತ್ತಿರುವುದು ಬಯಲಿಗೆ ಬಂದಿದೆ. ಈ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News