×
Ad

‘ಎನ್.ಇ.ಪಿ ಬಗ್ಗೆ ಚರ್ಚೆಗೆ ನಾವು ತಯಾರಾಗಿದ್ದೇವೆ': ಕ್ಯಾಂಪಸ್ ಫ್ರಂಟ್ ನಿಂದ ರಾಜ್ಯಾದ್ಯಂತ ಭಿತ್ತಿಪತ್ರ ಪ್ರದರ್ಶನ

Update: 2021-09-02 22:23 IST

ಬೆಂಗಳೂರು, ಸೆ.2: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ) ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್‍ರವರು ಎನ್.ಇ.ಪಿಯಲ್ಲಿ ಲೋಪದೋಷಗಳಿದ್ದರೆ ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

ಅವರ ಸವಾಲನ್ನು ಸ್ವೀಕರಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ‘ನಾವು ಚರ್ಚೆಗೆ ತಯಾರಾಗಿದ್ದೇವೆ, ನೀವು ತಯಾರಾಗಿದ್ದೀರಾ?’ ಎಂಬ ಭಿತ್ತಿಪತ್ರ ಪ್ರದರ್ಶನವನ್ನು ರಾಜ್ಯಾದ್ಯಂತ ಜಿಲ್ಲಾ, ಯುನಿಟ್ ಮಟ್ಟದಲ್ಲಿ ಮಾಡುವ ಮುಖಾಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಪ್ರತಿಭಟಿಸಿದರು.

ಖಾಸಗೀಕರಣ, ಕೇಂದ್ರೀಕರಣ ಹಾಗೂ ಕೇಸರೀಕರಣಕ್ಕೆ ಒತ್ತನ್ನು ನೀಡುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಇರುವ ಚರ್ಚೆಗೆ ಮುಕ್ತವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಿದ್ಧವಿದೆ, ಉನ್ನತ ಶಿಕ್ಷಣ ಸಚಿವರು ತಯಾರಾಗಿದ್ದೀರಾ? ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News