×
Ad

'ನಿಮ್ಮ ಪ್ರಶ್ನೆ ಅಧಿವೇಶನದಲ್ಲಿ ಕೇಳುವೆ' ಅಭಿಯಾನ

Update: 2021-09-02 22:57 IST

ಬೆಂಗಳೂರು, ಸೆ.2: ವಿಧಾನಸಭಾ ಅಧಿವೇಶನ ಹಿನ್ನೆಲೆ ಸಾರ್ವಜನಿಕರ ಪ್ರಶ್ನೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುವೆ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಅಭಿಯಾನವೊಂದನ್ನು ಹಮ್ಮಿಕೊಂಡಿರುವ ಅವರು, ಸಾರ್ವಜನಿಕರು ತಮ್ಮ ಪ್ರಶ್ನೆಗಳನ್ನು ನನಗೆ ತಲುಪಿಸಿ, ಇದೇ ತಿಂಗಳಿನಲ್ಲಿರುವ ಕಲಾಪದಲ್ಲಿ ನಾನು ಸರಕಾರದ ಮುಂದೆ ಪ್ರಸ್ತಾಪಿಸುವೆ ಎಂದು ಹೇಳಿದ್ದಾರೆ.

ಅಲ್ಲದೆ, ಬಿಜೆಪಿ ಸರಕಾರ ಉತ್ತಮ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಬರ, ನೆರೆ, ಕೋವಿಡ್ ನಿಯಂತ್ರಣ, ಹಗರಣಗಳು, ನಿರುದ್ಯೋಗ ಸಮಸ್ಯೆ ಸೇರಿದಂತೆ ಇನ್ನಿತರೆ ತೊಂದರೆಗಳಿವೆ.

ಈ ಬಗ್ಗೆ ಯಾವುದೇ ರೀತಿಯ ಪ್ರಶ್ನೆಗಳು ನಿಮ್ಮ ಮನದಲ್ಲಿ ಇದ್ದರೆ, ಈ ಕೂಡಲೇ ನನಗೆ ತಲುಪಿಸಿ. ಈ ಬಾರಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ನಿಮ್ಮೆಲ್ಲ ಪ್ರಶ್ನೆಗಳನ್ನು ಸರಕಾರಕ್ಕೆ ತಲುಪಿಸಲು ನಿಮ್ಮ ಪರವಾಗಿ ನಾನು ಧ್ವನಿಯಾಗುತ್ತೇನೆ. ಆಸಕ್ತರು ಮೊಬೈಲ್ ಸಂಖ್ಯೆ 9241669999 ಸಂರ್ಪಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News