2021-22ನೇ ಸಾಲಿನ ಉತ್ತಮ ಶಿಕ್ಷಕರ ಪ್ರಶಸ್ತಿಗೆ 20 ಪ್ರಾಥಮಿಕ ಶಿಕ್ಷಕರು, 11 ಪ್ರೌಢಶಾಲಾ ಶಿಕ್ಷಕರು ಆಯ್ಕೆ

Update: 2021-09-03 15:34 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.3: ಶಿಕ್ಷಣ ಇಲಾಖೆ ಕೊಡಮಾಡುವ 2021-22ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ತಲಾ 10ಸಾವಿರ ರೂ.ನಗದು, ಪುರಸ್ಕಾರ ಮತ್ತು ಅವರ ಶಾಲೆಗಳ ಅಭಿವೃದ್ಧಿಗೆ ಪ್ರತಿ ಶಾಲೆಗೆ 50ಸಾವಿರ ರೂ. ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್ ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆಯಿಂದ ಆಯ್ಕೆಯಾದವರ ಪಟ್ಟಿ: ಉಮೇಶ್ ಟಿ.ಪಿ.(ಕನ್ನಡ ಶಿಕ್ಷಕರು) ಚಿತ್ರದುರ್ಗ ಜಿಲ್ಲೆ, ಹೇಮಾ ಅಂಗಡಿ(ಕನ್ನಡ) ಬೆಳಗಾವಿ, ಚಂದ್ರು ವಾಯ್ ಎ.(ವಿಜ್ಞಾನ) ರಾಯಚೂರು, ಪರಮೇಶ್ವರಯ್ಯ ಎಂ.(ಕನ್ನಡ), ಬಳ್ಳಾರಿ, ಮಾರುತಿ ಹನುಮಪ್ಪ ಭಜಂತ್ರಿ(ಕನ್ನಡ) ಧಾರವಾಡ, ಪ್ರಕಾಶ್, ಶಿವಮೊಗ್ಗ, ಶಿವಶಂಕರಯ್ಯ(ಕನ್ನಡ), ತುಮಕೂರು, ಪಂಚಯ್ಯರಾಚಯ್ಯ, ಗದಗ, ಸದಪ್ಪ ದುಂಡಪ್ಪ ಏಳಗಂಟಿ(ಕನ್ನಡ), ಬಾಗಲಕೋಟೆ, ಗೋಪಾಲಸ್ವಾಮಿ(ವಿಜ್ಞಾನ), ಚಾಮರಾಜನಗರ, ಕೃಷ್ಣಪ್ಪ, ರಾಮನಗರ, ಜಿ.ಎಸ್.ಉಂಕಿ, ಹಾವೇರಿ, ಉಷಾ ವಿ., ಚಿಕ್ಕಬಳ್ಳಾಪುರ, ಜಮುನಾ ಬಿ.ಎ, ಬೆಂಗಳೂರು ಉತ್ತರ ಜಿಲ್ಲೆ, ಎಡ್ವರ್ಡ್ ಡಿಸೋಜಾ(ಕನ್ನಡ), ದಕ್ಷಿಣ ಕನ್ನಡ, ವಿ.ಜಿ.ವೆಂಕಟಾಚಲಯ್ಯ, ಬೆಂಗಳೂರು ಗ್ರಾಮಾಂತರ, ಮಹಾದೇವ, ಮೈಸೂರು, ಸ್ವಾಮಿ(ಮುಖ್ಯ ಶಿಕ್ಷಕರು) ಮಂಡ್ಯ, ಎಚ್.ಎಂ.ಮಂಗಳ(ಹಿಂದಿ), ದಾವಣಗೆರೆ, ನಾರಾಯಣಪ್ಪ(ಚಿತ್ರಗಾರ) ಕೊಪ್ಪಳ.

ಪ್ರೌಢಶಾಲಾ ಶಿಕ್ಷಕರು: ಕಿಶನ್‍ರಾವ್(ಕಲಾ ಶಿಕ್ಷಕರು), ಕೊಪ್ಪಳ, ಆರ್.ಯು.ನವೀನ್(ವಿಜ್ಞಾನ), ಚಿಕ್ಕಬಳ್ಳಾಪುರ, ಜಿ.ರಂಗನಾಥ(ವಿಜ್ಞಾನ), ಚಿತ್ರದುರ್ಗ, ಎಚ್.ಎನ್.ಶಿವಕುಮಾರ್(ಇಂಗ್ಲಿಷ್), ಚಿಕ್ಕಮಗಳೂರು, ಶಿವಲಿಂಗ(ಕನ್ನಡ) ಬೀದರ್, ಸದಾಶಿವಯ್ಯ(ದೈಹಿಕ) ಕೊಡಗು, ಶ್ರೀಕಾಂತ ರಾಮ ಪಟಗಾರ(ನಾಟಕ) ಶಿವಮೊಗ್ಗ, ಎಂ.ಎಸ್.ನಟರಾಜು(ಮುಖ್ಯ ಶಿಕ್ಷಕರು) ತುಮಕೂರು, ಸಪನಾ ಶ್ರೀಶೈಲ ಅನಿಗೋಳ(ವಿಜ್ಞಾನ) ಬಾಗಲಕೋಟೆ, ಬಸವರಾಜ ಶರಣಪ್ಪ, ವಿಜಯಪುರ, ಕೆ.ಸಂಗೀತಾ(ಚಿತ್ರಕಲಾ) ಮೈಸೂರು ಜಿಲ್ಲೆ ಇವರು ಆಯ್ಕೆಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News