ಕಲಬುರಗಿ ಮನಪಾ ಚುನಾವಣೆ: 49.40 ಶೇ. ಮತದಾನ

Update: 2021-09-04 04:41 GMT

ಕಲಬುರಗಿ, ಸೆ.4: ಕಲಬುರಗಿ ಮಹಾನಗರ ಪಾಲಿಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 49.40 ಶೇ. ಮತದಾನವಾಗಿದೆ.

ನಿನ್ನೆ ಬೆಳಗ್ಗೆಯಿಂದ ಸಂಜೆ 6 ಗಂಟೆಯ ವರೆಗೆ ಮನಪಾ 55 ವಾರ್ಡ್ ಗಳಿಗೆ ಮತದಾನ ನಡೆದಿದ್ದು ಕೆಲವು ಮತಗಟ್ಟೆಯಲ್ಲಿ  ನಕಲಿ ಮತದಾನಕ್ಕೆ ಸಂಬಂಧಿಸಿ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಚುನಾವಣೆ ಶಾಂತಿಯುತವಾಗಿತ್ತು.

ರಾಜ್ಯದಲ್ಲಿ ನಡೆದ ಮಹಾನಗರ ಪಾಲಿಕೆಗಳ ಮತದಾಗಳ ಪೈಕಿ  ಕಲಬುರಗಿ ಮಹಾನಗರ ಪಾಲಿಕೆಯ ಮತದಾನ ಪ್ರಮಾಣ ಅತ್ಯಂತ ಕಡಿಮೆ

55 ವಾರ್ಡಗಳ 300 ಅಭ್ಯರ್ಥಿಗಳ ಭವಿಷ್ಯ ಸದ್ಯ ಇವಿಎಂನಲ್ಲಿ ಭದ್ರವಾಗಿದ್ದು, ಸೆಪ್ಟೆಂಬರ್ 6ರಂದು ಮತದಾನ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News