ಭೂ ಕಂದಾಯ ಕಾಯಿದೆಯಡಿ ಆದಾಯದ ಗರಿಷ್ಠ ಮಿತಿ ಹೆಚ್ಚಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

Update: 2021-09-04 13:10 GMT

ಬೆಂಗಳೂರು, ಸೆ.4: ‘ರಾಜ್ಯ ಭೂ ಕಂದಾಯ ಕಾಯಿದೆ-1964’ 94-ಸಿ ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಪ್ರಸ್ತುತ ಇರುವ ವಾರ್ಷಿಕ ಆದಾಯದ ಗರಿಷ್ಠ ಮಿತಿಯನ್ನು 30,000 ರೂ.ಗಳಿಂದ 1,20,000 ರೂ.ಗಳಿಗೆ ಹೆಚ್ಚಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದಿರುವ ಅವರು, ಗರಿಷ್ಠ ಆದಾಯದ ಮಿತಿಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ-1964(ಕರ್ನಾಟಕ ಕಾಯಿದೆ-12 1964) 94-ಸಿಗೆ ತಿದ್ದುಪಡಿ ತಂದು ಗರಿಷ್ಠ ಮಿತಿಯನ್ನು 1,20,000 ರೂ.ಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸುವಂತೆ  ಕೋರಿದ್ದಾರೆ.

ಆಹಾರ ಇಲಾಖೆಯಲ್ಲಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಾಗಲು ಪ್ರಸ್ತುತ ಇರುವ ಆದಾಯದ ಮಿತಿ 1,20,000 ರೂ.ಇದೆ ಎಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News