×
Ad

ಶಿವಮೊಗ್ಗ : ಬಸ್ಸುಗಳ ಡೀಸೆಲ್ ಕಳವು ಪ್ರಕರಣ; ಇಬ್ಬರ ಬಂಧನ

Update: 2021-09-04 21:32 IST

ಶಿವಮೊಗ್ಗ (ಸೆ.04): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬಕ್ಕೆ ಸೇರಿದ ಶಿಕ್ಷಣ ಸಂಸ್ಥೆ ಬಸ್ಸುಗಳಿಂದ ಡಿಸೇಲ್ ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಡಿಸೇಲ್ ಮತ್ತು ಸರಕು ಸಾಗಣೆ ವಾಹನವೊಂದನ್ನು ವಶಕ್ಕೆ ಪಡೆದಿದ್ದಾರೆ. 

ಟಿಪ್ಪುನಗರದ ಸಯ್ಯದ್ ಸಬ್ರೇದ್ ಮತ್ತು ಸಯ್ಯದ್ ಜಾಫರ್ ಬಂಧಿತರು. ಡಿಸೇಲ್ ಕಳ್ಳತನ ಮಾಡುತ್ತಿದ್ದ ಸಂಬಂಧ ಶಂಕೆ ಮೇಲೆ ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಏನಿದು ಕೇಸ್?

ಸೋಮಿನಕೊಪ್ಪದ ಮೈತ್ರಿ ಅಪಾರ್ಟ್’ಮೆಂಟ್ ಬಳಿ ನಿಲ್ಲಿಸಿದ್ದ ಪಿಇಎಸ್ ಕಾಲೇಜು ಬಸ್ಸುಗಳಿಂದ ಡಿಸೇಲ್ ಕಳ್ಳತನ ಮಾಡಲಾಗಿತ್ತು. ಎರಡು ದೊಡ್ಡ ಬಸ್ಸುಗಳು ಮತ್ತು ಎರಡು ಮಿನಿ ಬಸ್ಸುಗಳಿಂದ ನಡುರಾತ್ರಿಯಲ್ಲಿ 580 ಲೀಟರ್ ಡಿಸೇಲ್ ಕಳವು ಮಾಡಲಾಗಿತ್ತು. 

ಕೃತ್ಯಕ್ಕೆ ಸ್ನೇಹಿತನ ಗಾಡಿ : ಸಯ್ಯದ್ ಸಬ್ರೇದ್ ಮತ್ತು ಸಯ್ಯದ್ ಜಾಫರ್, ಅಶೋಕ್ ಲೇಲ್ಯಾಂಡ್ ಲಗೇಜ್ ವಾಹನವನ್ನು ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದರು. ಇದು ಅವರ ಸ್ನೇಹಿತನದ್ದಾಗಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ. ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಇವರಿಬ್ಬರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ವಿಚಾರಣೆ ನಡೆಸಿದಾಗ ಬಸ್’ಗಳಲ್ಲಿ ಡಿಸೇಲ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇವರಿಂದ 90 ಲೀಟರ್ ಡಿಸೇಲನ್ನು ವಶಕ್ಕೆ ಪಡೆಯಲಾಗಿದೆ. 

ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರನ್ನು ಬಂಧಿಸಿ ವಿಚಾರಣೆ ಮುಂದುವರೆಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News