ವಿಜಯಪುರದಲ್ಲಿ ಭೂಕಂಪನದ ಅನುಭವ: ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು

Update: 2021-09-05 12:20 GMT

ವಿಜಯಪುರ, ಸೆ. 5: ವಿಜಯಪುರ ಜಿಲ್ಲಾ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಶನಿವಾರ ತಡರಾತ್ರಿ ಭೂಮಿ ನಡುಗಿದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ ದಾಖಲಾದ ಲಘು ತೀವ್ರತೆ ಭೂಕಂಪ ಎಂಬುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ.

ರಿಕ್ಟರ್ ಮಾಪಕದಲ್ಲಿ ದಾಖಲು 3.9 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಇದು ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದುವಾಗಿದೆ.

ಇನ್ನು, ರಾತ್ರಿ ಭೂಕಂಪನ ಹಿನ್ನೆಲೆ ಮನೆಗಳಲ್ಲಿನ ವಸ್ತುಗಳು ಮೇಲಿಂದ ಕೆಳಗೆ ಬಿದ್ದಿವೆ. ಕೂಡಲೇ ಜನರು ಮಕ್ಕಳು, ವೃದ್ಧರೊಂದಿಗೆ ಮನೆ ಬಿಟ್ಡು ಹೊರಗಡೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ವಿಜಯಪುರ ಜಿಲ್ಲೆ ಮಾತ್ರವಲ್ಲದೇ ನೆರೆಯ ಕಲಬುರ್ಗಿ ಜಿಲ್ಲೆಯ ಅಫಜಲಪುರ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಾರಾಷ್ಟ್ರ ರಾಜ್ಯದ ಸೋಲಾಪುರ ಭಾಗದಲ್ಲೂ ಭೂಕಂಪನ ಸಂಭವಿಸಿದ್ದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News