ಕೊರೋನವೈರಸ್ ಹರಡಿದ ವಿಯೆಟ್ನಾಂ ವ್ಯಕ್ತಿಗೆ 5 ವರ್ಷ ಜೈಲುಸಜೆ

Update: 2021-09-07 14:33 GMT

ಹನೋಯಿ: ಕಠಿಣ ಕೋವಿಡ್ -19 ಕ್ವಾರೆಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಹಾಗೂ  ಇತರರಿಗೆ ವೈರಸ್ ಹರಡಿದ್ದಕ್ಕಾಗಿ ವಿಯೆಟ್ನಾಂ ಸೋಮವಾರ ಓರ್ವ ವ್ಯಕ್ತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.

ದಕ್ಷಿಣ ಪ್ರಾಂತ್ಯದ ಕಾ ಮೌವ್ ಪೀಪಲ್ಸ್ ಕೋರ್ಟ್ ನಲ್ಲಿ ನಡೆದ ಒಂದು ದಿನದ ವಿಚಾರಣೆಯಲ್ಲಿ 28 ವರ್ಷದ ಲೆ ವಾನ್ ಟ್ರೈ ವಿರುದ್ಧ 'ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ಹರಡಿದ' ಆರೋಪ ಹೊರಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ವಿಯೆಟ್ನಾಂ ಸುದ್ದಿ ಸಂಸ್ಥೆ (ವಿಎನ್ಎ) ವರದಿ ಮಾಡಿದೆ.

ಉದ್ದೇಶಿತ ಸಾಮೂಹಿಕ ಪರೀಕ್ಷೆ, ಆಕ್ರಮಣಕಾರಿಯಾಗಿ ಸಂಪರ್ಕ ಪತ್ತೆಹಚ್ಚುವಿಕೆ, ಕಠಿಣ ಗಡಿ ನಿರ್ಬಂಧಗಳು ಹಾಗೂ  ಕಟ್ಟುನಿಟ್ಟಾದ ಕ್ವಾರಂಟೈನ್  ಮೂಲಕ ವಿಯೆಟ್ನಾಂ ವಿಶ್ವದಲ್ಲಿ ಕೊರೋನವೈರಸ್ ವಿರುದ್ಧ ಯಶಸ್ಸುಸಾಧಿಸಿದ ದೇಶಗಳ ಪೈಕಿ ಒಂದಾಗಿದೆ. ಆದರೆ ಏಪ್ರಿಲ್ ಅಂತ್ಯದಿಂದ ಹೊಸ ಸೋಂಕಿನ ಪ್ರಕರಣಗಳು ಆ ದಾಖಲೆಯನ್ನು ಹಾಳು ಮಾಡಿವೆ.

"ಟ್ರೈ  ಅವರು ಹೋ ಚಿ ಮಿನ್ಹ್ ನಗರದಿಂದ ಕಾ ಮೌಗೆ ಹಿಂತಿರುಗಿದರು ಹಾಗೂ  21 ದಿನಗಳ ಸಂಪರ್ಕತಡೆ(ಕ್ವಾರಂಟೈನ್ )ಅನ್ನು ಉಲ್ಲಂಘಿಸಿದ್ದಾರೆ. ಟ್ರೈ ಎಂಟು ಜನರಿಗೆ ಸೋಂಕು ಹರಡಿದ್ದಾರೆ. ಅವರಲ್ಲಿ ಒಬ್ಬರು ಒಂದು ತಿಂಗಳ ಚಿಕಿತ್ಸೆಯ ನಂತರ ವೈರಸ್‌ನಿಂದ ಸಾವನ್ನಪ್ಪಿದರು" ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News