ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಕೊಡುಗೆ ಏನು: ಸಂಸದ ಪ್ರತಾಪ್ ಸಿಂಹ

Update: 2021-09-08 16:20 GMT

ಮೈಸೂರು, ಸೆ.8: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೂ ರಾಜೀವ್‌ಗಾಂಧಿ ಅವರಿಗೂ ಸಂಬಂಧವೇ ಇಲ್ಲ. ಹಾಗಾಗಿ ಅವರ ಹೆಸರನ್ನು ತೆಗೆದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರಿಡುವಂತೆ ಮನವಿ ಮಾಡಿದ್ದೇನೆ ಎಂದು ಸಂಸದ ಪ್ರತಾಪ ಸಿಂಹ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಷ್ಟ್ರೀಯ ಉದ್ಯಾನವಕ್ಕೆ ರಾಜೀವ್‌ಗಾಂದಿ ಕೊಡುಗೆ ಏನು? ಇನ್ನು ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೂ ಇವರಿಗೂ ಏನು ಸಂಬಂಧ? ಇವರ ಕೊಡುಗೆ ಏನು ಇಲ್ಲ ಎಂದ ಮೇಲೆ ಇವರ ಹೆರನ್ನು ಏಕೆ ಇಡಬೇಕು? ನೆಹರೂ ಕುಟುಂಬದ ಹೆಸರನ್ನು ಇಟ್ಟು ಸೋನಿಯಾಗಾಂಧಿ ಅವರನ್ನು ಮೆಚ್ಚಿಸುವ ಕೆಲಸ ಬಿಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್‌ಗಾಂಧಿ ಕೊಡುಗೆ ಏನೇನು ಇಲ್ಲ, ಪ್ರಥಮ ಸೇನಾಪಡೆಯ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೊಡಗಿಗೆ ಬಂದು ನೆಲೆಸಿದ್ದರು. ಕಾರ್ಯಾಪ್ಪ ಮತ್ತು ರಾಜೀವ್‌ಗಾಂಧಿ ಅರ್ಹರೇ? ಎಂಬುದನ್ನು ಮೊದಲು ಗಮನಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News