ಬಿಟ್ಕಾಯಿನ್ ಮೌಲ್ಯ ಕುಸಿತ

Update: 2021-09-08 16:52 GMT

 ಸಾನ್ ಸಾಲ್ವದೋರ್, ಸೆ.8: ಬಿಟ್ ಕಾಯಿನ್ ಅನ್ನು ಕಾನೂನು ಮಾನ್ಯ ಚಲಾವಣೆಯ ಕರೆನ್ಸಿ ಎಂದು ಸ್ವೀಕರಿಸಿದ ಮೊತ್ತಮೊದಲ ದೇಶವಾಗಿ ಎಲ್ಸಾಲ್ವದೋರ್ ಗುರುತಿಸಿಕೊಂಡ ಬೆನ್ನಿಗೇ, ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣದಿಂದ ಬಿಟ್ ಕಾಯಿನ್ ನ ಮೌಲ್ಯ 17%ದಷ್ಟು ಕುಸಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೆ.7ರಿಂದ ಬಿಟ್ಕಾಯಿನ್ ಅನ್ನು ಕಾನೂನುಬದ್ಧ ಚಲಾವಣೆಯ ಕರೆನ್ಸಿ ಎಂದು ಘೋಷಿಸುವುದಾಗಿ ಎಲ್ಸಾಲ್ವದೋರ್ ಸರಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬಿಟ್ಕಾಯಿನ್ ವೌಲ್ಯ ಹೆಚ್ಚಬಹುದು ಎಂದು ಖರೀದಿಗಾರರು ಬೃಹತ್ ಸಂಖ್ಯೆಯಲ್ಲಿ ಖರೀದಿಗೆ ಮುಗಿಬಿದ್ದರು. ಆದರೆ ಸರಕಾರದ ಡಿಜಿಟಲ್ ವ್ಯಾಲೆಟ್ನಲ್ಲಿ ತಾಂತ್ರಿಕ ದೋಷ ಕಂಡು ಬಂದದ್ದರಿಂದ ಗೊಂದಲಗೊಂಡ ಖರೀದಿದಾರರು ಮಾರಾಟಕ್ಕೆ ಮುಂದಾದರು. ಇದರಿಂದ ಬಿಟ್ಕಾಯಿನ್ ಮೌಲ್ಯ ಇಳಿಕೆಯಾಗಿದೆ ಎಂದು ಮೂಲಗಳು ಹೇಳಿವೆ. ಬಿಟ್ಕಾಯಿನ್ ವೌಲ್ಯ ಕುಸಿಯುತ್ತಿದ್ದಂತೆಯೇ ತಮ್ಮ ಸರಕಾರ ಖರೀದಿ ಹೆಚ್ಚಿಸಿದ್ದು ಈಗ ದೇಶದ ಬಳಿ 550 ಬಿಟ್ಕಾಯಿನ್ಗಳಿವೆ ಎಂದು ಎಲ್ಸಾಲ್ವದೋರ್ ಅಧ್ಯಕ್ಷ ನಯೀಬ್ ಬುಕೆಲೆ ಟ್ವಿಟರ್ನಲ್ಲಿ ಘೋಷಿಸಿದ್ದಾರೆ. ಮಂಗಳವಾರ ನ್ಯೂಯಾರ್ಕ್ ಕ್ರಿಪ್ಟೊಕರೆನ್ಸಿ ಮಾರುಕಟ್ಟೆಯಲ್ಲಿ 50,000 ಡಾಲರ್ನಷ್ಟಿದ್ದ ಬಿಟ್ಕಾಯಿನ್ ವೌಲ್ಯ ದಿಢೀರನೆ 43,050 ಡಾಲರ್ಗೆ ಕುಸಿದಿದೆ ಎಂದು ವರದಿಯಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News