×
Ad

ಅಫ್ಘಾನ್‌ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಏರಿಕೆ: ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ?

Update: 2021-09-10 18:22 IST

ಬೆಂಗಳೂರು: ಕರ್ನಾಟಕದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಸೆಪ್ಟೆಂಬರ್ 4ರಂದು ಸುದ್ದಿ ಸಂಸ್ಥೆಯೊಂದರ ಜತೆಗೆ ಮಾತನಾಡುತ್ತಾ "ಅಫ್ಗಾನಿಸ್ತಾನದಲ್ಲಿನ ತಾಲಿಬಾನ್ ಬಿಕ್ಕಟ್ಟಿನಿಂದಾಗಿ  ಕಚ್ಛಾ ತೈಲ ಬೆಲೆ  ಪೂರೈಕೆಯಲ್ಲಿ ಬಹಳಷ್ಟು ಇಳಿಕೆಯಾಗಿದೆ. ಇದೇ ಕಾರಣದಿಂದ ದೇಶದಲ್ಲಿ ಎಲ್‍ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುತ್ತಿವೆ. ಬೆಲೆಯೇರಿಕೆ ಹಿಂದಿನ ಕಾರಣಗಳನ್ನು ತಿಳಿಯುವಷ್ಟು ಮತದಾರರು ಪ್ರಬುದ್ಧರಾಗಿದ್ಧಾರೆ" ಎಂದು ಹೇಳಿದ್ದರು.

ಆದರೆ ಶಾಸಕರ ಈ ಹೇಳಿಕೆ  ತಪ್ಪು. ಮೊದಲನೆಯದಾಗಿ ಭಾರತಕ್ಕೆ ಕಚ್ಛಾ ತೈಲ ಪೂರೈಕೆ ಮಾಡುತ್ತಿರುವ ದೇಶಗಳಲ್ಲಿ ಅಫ್ಘಾನಿಸ್ತಾನ್ ಸೇರಿಲ್ಲ. ಎರಡನೆಯದಾಗಿ ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟು ಜಾಗತಿಕ ಕಚ್ಛಾ ತೈಲ ಪೂರೈಕೆ ಮೇಲೆ ಪ್ರಭಾವ ಬೀರಿದೆ ಎಂಬುದು ಇನ್ನೂ ಸಾಬೀತಾಗಿಲ್ಲ ಎಂದು newslaundry.com ವರದಿ ಮಾಡಿದೆ.

ಅಮೆರಿಕಾ ಮತ್ತು ಚೀನಾ ನಂತರ ಗರಿಷ್ಠ ಕಚ್ಛಾ ತೈಲ ಆಮದು ಮಾಡುವ ರಾಷ್ಟ್ರ  ಭಾರತ ಆಗಿದೆ.  ದೇಶ ತನ್ನ ಶೇ 82ರಷ್ಟು ಕಚ್ಛಾ ತೈಲ ಅಗತ್ಯತೆಗಳನ್ನು OPEC ಗೆ ಸೇರಿದ ಇರಾಕ್, ಸೌದಿ ಅರೇಬಿಯಾ, ನೈಜೀರಿಯಾ, ಯುಎಇ, ಕುವೈತ್ ಮತ್ತು ವೆನೆಜುವೆಲಾದಿಂದ ಆಮದು ಮಾಡುತ್ತಿದೆಯೇ ಹೊರತು ಅಫ್ಗಾನಿಸ್ತಾನದಿಂದ ಆಮದು ಮಾಡುತ್ತಿಲ್ಲ ಎಂದು ವರದಿ ತಿಳಿಸಿದೆ.

ಕಚ್ಚಾ ತೈಲ ಖರೀದಿಗಳ ಮೌಲ್ಯವು $ 101.9 ಬಿಲಿಯನ್ ಆಗಿದ್ದಾಗ, 2019 ರಿಂದ ಎಲ್ಲಾ ಕಚ್ಚಾ ತೈಲ ಆಮದುಗಳ ಮೌಲ್ಯವು 36.7% ರಷ್ಟು ಕಡಿಮೆಯಾಗಿದೆ. ಭಾರತಕ್ಕೆ ಕಚ್ಚಾ ತೈಲವನ್ನು ರಫ್ತು ಮಾಡುವ 15 ದೇಶಗಳಲ್ಲಿ, ಪೂರೈಕೆಯಲ್ಲಿ ಬೆಳವಣಿಗೆಯನ್ನು ತೋರಿಸಿದ ಮೂರು ದೇಶಗಳಿವೆ, ಅವುಗಳೆಂದರೆ, ಬ್ರೆಜಿಲ್ (19.3%ರಷ್ಟು), ಕತಾರ್ (11.1%) ಮತ್ತು ಒಮಾನ್ (2.8%). ಆದರೆ, ವೆನಿಜುವೆಲಾ (-59.3%), ಅಂಗೋಲಾ (-50.1%), ಮಲೇಷ್ಯಾ (-47.7%), ನೈಜೀರಿಯಾ (-44.4%) ಮತ್ತು ಮೆಕ್ಸಿಕೋ (-41.4%) ದೇಶಗಳು ಭಾರತಕ್ಕೆ ಕಚ್ಚಾ ತೈಲ ಪೂರೈಕೆಯ ಮೌಲ್ಯದಲ್ಲಿ ಕುಸಿತವನ್ನು ತೋರಿಸಿವೆ .

CARE ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್, ತಾಲಿಬಾನ್ ಬಿಕ್ಕಟ್ಟು ಮತ್ತು ಇಂಧನ ಬೆಲೆ ಏರಿಕೆಯನ್ನು ಲಿಂಕ್ ಮಾಡಲಾಗುವುದಿಲ್ಲ ಎಂದು ಹೇಳಿದರು. "ಅಫ್ಘಾನಿಸ್ತಾನವು ತೈಲದ ಬೇಡಿಕೆ ಅಥವಾ ಪೂರೈಕೆಯ ಪರಿಣಾಮವಲ್ಲ ಮತ್ತು ಪ್ರಸ್ತುತ ಬಿಕ್ಕಟ್ಟನ್ನು [ಅವರ] ಸ್ವಂತ ದೇಶಕ್ಕೆ ಸ್ಥಳೀಕರಿಸಲಾಗಿದೆ. ಆದ್ದರಿಂದ, ತೈಲ ಬೆಲೆಗಳನ್ನು ಇದಕ್ಕೆ ಹೋಲಿಕೆ ಮಾಡಲು ಅಥವಾ ಜೋಡಿಸಲು ಸಾಧ್ಯವಿಲ್ಲ" ಎಂದು ಸಬ್ನವಿಸ್ ಹೇಳಿದರು.

ಮುಂಬೈ ಮೂಲದ ಅರ್ಥಶಾಸ್ತ್ರಜ್ಞ ಅಜಿತ್ ರಾನಡೆ ಅವರೊಂದಿಗೆ ಮಾತನಾಡಿದ ವೇಳೆ. "ಭಾರತವು ಅಫ್ಘಾನಿಸ್ತಾನದಿಂದ ತೈಲವನ್ನು ಆಮದು ಮಾಡಿಕೊಳ್ಳದ ಕಾರಣ, ಈ ಹೇಳಿಕೆಯು ಪರೋಕ್ಷ ಮತ್ತು ದುರ್ಬಲವಾಗಿದೆ ಎಂದು ಅವರು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಬೆಲ್ಲದ್ ಅವರಲ್ಲಿ ಅವರ ಹೇಳಿಕೆ ಕುರಿತು ಸ್ಪಷ್ಟೀಕರಣ ಕೇಳಿದಾಗ ಮಾಧ್ಯಮ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದೆ ಎಂದಿದ್ದಾರೆ. "ಅಂತರಾಷ್ಟ್ರೀಯ ವಿದ್ಯಮಾನಗಳು ಯಾವತ್ತೂ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದು ನನ್ನ ಮಾತಿನ ಅರ್ಥವಾಗಿತ್ತು," ಎಂದು ಅವರು ಹೇಳಿದ್ದಾರೆ ಎಂದು newslaundry.com ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News