ಪರಿಷತ್ ಸಭಾ ನಾಯಕರಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂದುವರಿಕೆ
Update: 2021-09-11 21:56 IST
ಬೆಂಗಳೂರು, ಸೆ. 11: ವಿಧಾನ ಪರಿಷತ್ ಕಲಾಪ ಸೆ.13ರಿಂದ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಷತ್ ಸಭಾ ನಾಯಕರನ್ನಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.
ಈ ಕುರಿತು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಿಎಂ ಅಧಿಕೃತ ಮಾಹಿತಿ ನೀಡಿದ್ದು, ಪರಿಷತ್ ಅಧಿವೇಶನ ಕಲಾಪದ ಸಂದರ್ಭದಲ್ಲಿ ಸರಕಾರದ ನಿಲುವು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಲಿದ್ದಾರೆ ಎಂದು ತಿಳಿಸಲಾಗಿದೆ.