×
Ad

ಜನರ ಭಾವನೆಗಳಿಗೆ ತಕ್ಕಂತೆ ಸ್ಪಂದಿಸುವುದು ನಮ್ಮ ಜವಾಬ್ದಾರಿ: ಶಾಸಕ ಎಸ್.ಎ.ರಾಮದಾಸ್

Update: 2021-09-11 23:57 IST

ಮೈಸೂರುಸೆ.11: ಹಿಂದೂ ದೇವಸ್ಥಾನ ತೆರವು  ಕ್ರಮ ಸರಿಯಲ್ಲ ಎಂಬ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಸ್.ಎ ರಾಮದಾಸ್, ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ನಡೆಯುತ್ತಿದೆ ಜನರ ಭಾವನೆಗಳಿಗೆ ತಕ್ಕಂತೆ ಸ್ಪಂಧಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವು ಮಾಡುತ್ತಿಲ್ಲ. ಮೊದಲು ಅದನ್ನು ಉಳಿಸಿಕೊಳ್ಳುವ ಯೋಚನೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಸ್ಥಳಾಂತರಕ್ಕೆ ಚಿಂತನೆ ಇದೆ. ಇದೆರಡು ಸಾಧ್ಯವಾಗದಿದ್ದಾಗ ಅದನ್ನು ತೆರವು ಮಾಡಲಾಗುತ್ತಿದೆ. ಇದರಲ್ಲಿ ಆ ಧರ್ಮದ್ದು ಈ ಧರ್ಮದ್ದು ಎಂಬುದು ಏನು ಇಲ್ಲ ಎಂದರು.

ನಾವು ಆದಷ್ಟು ಎಲ್ಲ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳುವ ಸ್ಥಳಾಂತರ ಮಾಡುವ ಚಿಂತನೆ ಇದೆ. ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ  ಗಮನಕ್ಕೂ ತರುತ್ತೇನೆ. ಇದರಲ್ಲಿ ಒಂದು ಕ್ಷೇತ್ರ ಒಂದು ಧರ್ಮ ಎನ್ನುವ ವಿಚಾರ ಇರುವುದಿಲ್ಲ ಎಂದು  ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News