ರಾಜ್ಯ ಪುರಾತತ್ವ ಇಲಾಖೆ ಕನ್ನಡ, ಸಂಸ್ಕೃತಿ ಇಲಾಖೆಯೊಂದಿಗೆ ವಿಲೀನ: ಸಿಎಂ ಜತೆಗೆ ಚರ್ಚಿಸಿ ತೀರ್ಮಾನ
ಬೆಂಗಳೂರು, ಸೆ.13: ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಪುರಾತತ್ವ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಸೇರಿಸುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ವಿ.ಸುನೀಲ್‍ಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಡಾ.ತೇಜಶ್ವಿನಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ನಿರ್ವಹಣೆ ಇಲ್ಲದೆ ಪಾಳುಬಿದ್ದಿರುವ ಅರಮನೆ, ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಉಳಿಸಲು, ಬೆಳೆಸಲು ಬೇಕಾದ ಎಲ್ಲ ಕೆಲಸ ನಮ್ಮ ಸರಕಾರ ಮಾಡುತ್ತಿದೆ. 22 ವಿವಿಗಳಲ್ಲಿ ಅಧ್ಯಯನ ಮಾಡುತ್ತಿರುವ 8 ರಾಜ್ಯಗಳ ಅನ್ಯ ಭಾಷಿಕ ವಿದ್ಯಾರ್ಥಿಗಳಿಗೆ ವಿದ್ಯಾವೇತನ ನೀಡಲಾಗುತ್ತಿದೆ. ಕೊರೋನ ವೇಳೆ ಎಲ್ಲ ಚಟುವಟಿಕೆ ಸ್ಥಗಿತವಾಗಿತ್ತು. ಆದರೆ ಕನ್ನಡ ಪ್ರಾಧಿಕಾರದಿಂದ ಆನ್‍ಲೈನ್ ಮುಖಾಂತರ 188 ಕಾರ್ಯಕ್ರಮವನ್ನು ಕನ್ನಡಪರವಾಗಿ ಮಾಡಿದ್ದೇವೆ ಎಂದರು.