×
Ad

ನವೀಕರಿಸುವ ಇಂಧನ ಮೂಲದ ವಿದ್ಯುತ್ ಬ್ಯಾಂಕಿಂಗ್‍ಗೆ ಅವಕಾಶ: ಸಚಿವ ವಿ.ಸುನೀಲ್‍ಕುಮಾರ್

Update: 2021-09-13 22:06 IST

ಬೆಂಗಳೂರು, ಸೆ.13: ನವೀಕರಿಸುವ ಇಂಧನ ಮೂಲದ ವಿದ್ಯುತ್ ಬ್ಯಾಂಕಿಂಗ್‍ಗೆ ಅವಕಾಶ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. 

ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಶೇ.50ರಷ್ಟು ನವೀಕರಿಸುವ ಇಂಧನ ಮೂಲದಿಂದಲೇ ಬರುತ್ತಿದೆ ಎಂದರು.

ನವೀಕರಿಸುವ ಇಂಧನ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ವಿದ್ಯುತ್ ಬ್ಯಾಂಕಿಂಗ್ ತೆಗೆದು ಹಾಕುವ ಕುರಿತು ಸುತ್ತೋಲೆ ಹೊರಡಿಸಿದ ನಂತರ ಈಗ ಮತ್ತೆ ಪರಿಶೀಲನೆ ಮಾಡಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಂತೆ ಪುನಃ ಬ್ಯಾಂಕಿಂಗ್ ಸೌಲಭ್ಯವನ್ನು ಕಲ್ಪಿಸುವ ಕುರಿತು ಸರಕಾರದಿಂದ ಅನುಮೋದನೆ ನೀಡಲಾಗುತ್ತಿದೆ, ಸದಸ್ಯರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News