ಶಿವಮೊಗ್ಗ: 'ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ'; ಮದ್ಯದ ಅಂಗಡಿ ವಿರೋಧಿಸಿ ಗ್ರಾಮಸ್ಥರ ಅಭಿಯಾನ

Update: 2021-09-14 07:48 GMT

ಶಿವಮೊಗ್ಗ: ಗ್ರಾಮದಲ್ಲಿನ ಮದ್ಯದಂಗಡಿ ಬಂದ್ ಮಾಡುವಂತೆ ಅಭಿಯಾನ ಆರಂಭಿಸಿರುವ ಗ್ರಾಮಸ್ಥರು, ಮದ್ಯದಂಗಡಿ ಬಂದ್ ಮಾಡದ ಹೊರತು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಸಾಗರ ತಾಲೂಕಿನ ಪಡವಗೋಡು ಗ್ರಾಮ‌ ಪಂಚಾಯತಿಯ ಬೆಳ್ಳಿಕೊಪ್ಪ ಗ್ರಾಮಸ್ಥರಿಂದ ಕಳೆದ ಡಿಸೆಂಬರ್ ನಲ್ಲಿ ಕೂಡ ಮದ್ಯದಂಗಡಿ ವಿರೋಧಿಸಿ, ಚುನಾವಣೆ ಬಹಿಷ್ಕಾರ ಮಾಡಿದ್ದರು. ಈ ವೇಳೆ ಮದ್ಯದಂಗಡಿ ಬಂದ್ ಮಾಡಿ, ಮತದಾನ ಮಾಡುವಂತೆ ಅಧಿಕಾರಿಗಳು. ಮನವೊಲಿಸಿದ್ದರು. ಇದೀಗ ಮತ್ತೇ ಗ್ರಾಮದಲ್ಲಿ  ಎಂಎಸ್ಐಎಲ್ ಮಳಿಗೆ ಆರಂಭಿಸಿರುವ ಹಿನ್ನೆಲೆ ಹೊಸ ಅಭಿಯಾನ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News