ಶಿವಮೊಗ್ಗ: ತಾಯಿಯ ಹತ್ಯೆಗೈದ ಮಗನ ಬಂಧನ
Update: 2021-09-14 21:20 IST
ಶಿವಮೊಗ್ಗ, ಸೆ.14: ತಾಯಿಯ ಕಪಾಳಕ್ಕೆ ಹೊಡೆದು, ಆಕೆಯ ಕುತ್ತಿಗೆಯನ್ನು ತುಳಿದು ಮಗನೆ ಹತ್ಯೆ ಮಾಡಿದ ಭೀಕರ ಘಟನೆ ಬುಳ್ಳಾಪುರದಲ್ಲಿ ನಡೆದಿದೆ. ಈ ಸಂಬಂಧ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ವನಜಾಕ್ಷಿ (45) ಮೃತ ಮಹಿಳೆ. ದೇವರಾಜ್ (27) ತನ್ನ ತಂದೆ ಮತ್ತು ತಾಯಿ ಜೊತೆಗೆ ಜಗಳವಾಡಿದ್ದಾನೆ. ಈ ವೇಳೆ ಸಿಟ್ಟಿಗೆದ್ದು ತಾಯಿಯ
ಕಪಾಳಕ್ಕೆ ಹೊಡೆದಿದ್ದಾನೆ. ಆಕೆ ಕುಸಿದು ಬೀಳುತ್ತಿದ್ದಂತೆ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದಿದ್ದಾನೆ. ಘಟನೆಯಲ್ಲಿ ವನಜಾಕ್ಷಿ ಅವರು ಉಸಿರುಗಟ್ಟಿ
ಮತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೇವರಾಜ್ ನನ್ನು ಬಂಧಿಸಿದ್ದು,
ತನಿಖೆ ಮುಂದುವರಿಸಿದ್ದಾರೆ.