×
Ad

ಕೈಗಾರಿಕಾ ತರಬೇತಿ ಸಂಸ್ಥೆಗಳ ಅತಿಥಿ ಬೋಧಕರಿಗೆ ಅನುದಾನ ಬಿಡುಗಡೆ: ಆದೇಶ ಹೊರಡಿಸಿದ ಸರಕಾರ

Update: 2021-09-14 21:32 IST

ಬೆಂಗಳೂರು, ಸೆ.14: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಬೋಧಕರಿಗೆ ಮೊದಲ ಮತ್ತು ಎರಡನೆ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ವಿ. ಸಂಕನೂರು, ಐಟಿಐ ಸಂಸ್ಥೆಗಳಲ್ಲಿ ಸುಮಾರು ಸಾವಿರ ಅತಿಥಿ ಉಪನ್ಯಾಸಕರಿಗೆ 2021ರ ಮಾರ್ಚ್‍ನಿಂದ ಆಗಸ್ಟ್‍ವರೆಗೆ ಒಟ್ಟು ನಾಲ್ಕು ತಿಂಗಳ (ಮೇ ಹೊರತುಪಡಿಸಿ) ವೇತನ ಬಿಡುಗಡೆ ಆಗಿಲ್ಲ. ಆ ಉಪನ್ಯಾಸಕರು ಮತ್ತು ಅವಲಂಬಿತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗಮನಸೆಳೆದರು.

ಬೆನ್ನಲ್ಲೇ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸಂಭಾವನೆ ಪಾವತಿಸುವ ಹಾಗೂ ಇತರ ವೇತನೇತರ ಬದ್ಧ ವೆಚ್ಚಗಳಿಗೆ 2021-22ನೆ ಸಾಲಿನ ಮೊದಲ ಮತ್ತು ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಿದ ಆದೇಶ ಹೊರಬಿದ್ದಿದೆ.

ಸೋಮವಾರ(ಸೆ. 13)ವೇ ಈ ಸಂಬಂಧದ ಆದೇಶವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೊರಡಿಸಿದ್ದಾರೆ. ಕೋವಿಡ್ ನಿರ್ಬಂಧದ ಅವಧಿಯಲ್ಲಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸದ ಕಾರಣ ಗೌರವಧನ ಪಾವತಿಸುವ ಕುರಿತ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ ಎಂದೂ ಸಚಿವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News