×
Ad

ಚಾಮರಾಜನಗರ: ಹುಟ್ಟುಹಬ್ಬದಂದೇ ವಿದ್ಯುತ್ ಆಘಾತಕ್ಕೊಳಗಾಗಿ 3 ವರ್ಷದ ಮಗು ಮೃತ್ಯು

Update: 2021-09-16 11:24 IST

ಚಾಮರಾಜನಗರ, ಸೆ.16: ಮೂರು ವರ್ಷದ ಹೆಣ್ಣು ಮಗುವೊಂದು ಹುಟ್ಟುಹಬ್ಬದ ದಿನದಂದೇ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಮೃತಪಟ್ಟ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಿದ್ಧಲಿಂಗಸ್ವಾಮಿ ಎಂಬುವವರ ಪುತ್ರಿ ನಿವೇದಿತಾ(3) ಮೃತಪಟ್ಟ ಮಗು. ಬುಧವಾರ ಈ ಅವಘಡ ಸಂಭವಿಸಿದೆ. ಬುಧವಾರ ನಿವೇದಿತಾಳ ಹುಟ್ಟುಹಬ್ಬವಾಗಿದ್ದು, ಈ  ಸಂಭ್ರಮದಲ್ಲಿದ್ದ ಮಗು ಅಪರಾಹ್ನ 3:30ರ ಸುಮಾರಿಗೆ ಜಮೀನಿನಲ್ಲಿ ಆಟವಾಡುತ್ತಿತ್ತು. ಈ ವೇಳೆ ಮಗು ಜಮೀನಿನಲ್ಲಿದ್ದ ಪಂಪ್‌ ಸ್ಟಾರ್ಟರ್‌ ಹತ್ತಿರ ಹೋಗಿದೆ. ಹೇಗೆ ವಿದ್ಯುತ್‌ ಸ್ಪರ್ಶ ಆಯಿತು ಎಂಬುದು ಪೋಷಕರಿಗೂ ಗೊತ್ತಿಲ್ಲ. ಅಸ್ವಸ್ಥಗೊಂಡಿದ್ದ ಮಗುವನ್ನು ಕಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗು ಕೊನೆಯುಸಿರೆಳೆದಿದೆ ಎಂದು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಬಿ. ಪುಟ್ಟಸ್ವಾಮಿ  ತಿಳಿಸಿದ್ದಾರೆ.

ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News