ಮಡಿಕೇರಿ: ಚೆಂಬು ಗ್ರಾಪಂ ಸದಸ್ಯೆ ಸಹಿತ ಇಬ್ಬರ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

Update: 2021-09-16 09:26 GMT

ಮಡಿಕೇರಿ ಸೆ.16: ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಗುಡ್ಡದ ಮರವೊಂದರಲ್ಲಿ ಜೋಡಿ ಮೃತದೇಹ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ಮೃತರನ್ನು ಚೆಂಬು ಗ್ರಾಪಂ ಸದಸ್ಯೆ ಕಮಲಾ(35) ಹಾಗೂ ಆಕೆಯ ಸಂಬಂಧಿಕ ಮುತ್ತು (50) ಎಂದು ಗುರುತಿಸಲಾಗಿದೆ.

ಸೆ.15ರ ಸಂಜೆಯಿಂದ ಇವರಬ್ಬರು ದಬ್ಬಡ್ಕ ಗ್ರಾಮದಿಂದ ನಾಪತ್ತೆಯಾಗಿದ್ದು, ಗ್ರಾಮಸ್ಥರು ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಮರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಗ್ರಾಪಂ ಸದಸ್ಯೆ ಕಮಲಾ ವಿವಾಹಿತೆಯಾಗಿದ್ದು, ಒಂದು ಮಗುವಿದೆ. ಮೃತ ಮುತ್ತು ಕಮಲಾ ಅವರ ಸಂಬಂಧಿಕರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸಾವಿನ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News