ನಂಜನಗೂಡು ದೇವಾಲಯ ತೆರವು ವಿರೋಧಿಸಿ ದಾವಣಗೆರೆಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

Update: 2021-09-16 13:34 GMT

ದಾವಣಗೆರೆ:  ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಚ್ಚಗಳ್ಳಿ ಗ್ರಾಮದಲ್ಲಿ ಮಹದೇವಮ್ಮ ಮತ್ತು ಭೆರವೇಶ್ವರ ದೇವಾಲಯ ವನ್ನ ಅಕ್ರಮವಾಗಿ ಧ್ವಂಸ ಮಾಡಿರುವ ಮೈಸೂರು ಜಿಲ್ಲಾಧಿಕಾರಿ, ನಂಜನಗೂಡು ತಹಶೀಲ್ದಾರ್ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗುರುವಾ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸರ್ವೋಚ್ಛ ನ್ಯಾಯಾಲಯ  2009ರ ಸೆ.30 ರಂದು ಸಾರ್ವಜನಿಕ ಪ್ರದೇಶ, ಪಾರ್ಕ್‍ಗಳಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳನ್ನು ಕಟ್ಟಬಾರದು. ಈ ಆದೇಶದ ದಿನಾಂಕದ ಹಿಂದೆ ಯಾವುದಾದರೂ ಕಟ್ಟಡ ಕಟ್ಟಿದ್ದಲ್ಲಿ ರಾಜ್ಯ ಸರ್ಕಾರ ಎಲ್ಲ ವಿಚಾರಗಳ ವಿಮರ್ಶಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಆದೇಶ ನೀಡಿದೆ. ಮೈಸೂರು ಜಿಲ್ಲಾಡಳಿತ ಆದೇಶವನ್ನ ತಪ್ಪಾಗಿ ಅರ್ಥೈಸಿಕೊಂಡು ರಾತ್ರೋರಾತ್ರಿ ಹಿಂದು ದೇವಾಲಯ ತೆರವುಗೊಳಿಸಿರುವುದು ಹಿಂದು ಜಾಗರಣ ವೇದಿಕೆ ಅತ್ಯುಗ್ರವಾಗಿ ಖಂಡಿಸುತ್ತದೆ. ಮೈಸೂರು ಜಿಲ್ಲಾ„ಕಾರಿ ಡಾ. ಗೌತಮ್ ಬಗಾದಿ, ತಹಶೀಲ್ದಾರ್ ಮೋಹನ್‍ಕುಮಾರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹುಚ್ಚಗಳ್ಳಿ ಮಹದೇವಮ್ಮ ಮತ್ತು ಭೆರವೇಶ್ವರ ದೇವಾಲಯಕ್ಕೆ ಐದು ನೂರು ವರ್ಷಗಳ ಸುಧೀರ್ಘ ಇತಿಹಾಸವೇ ಇದೆ. ಮೈಸೂರು ಅರಸರು ಎರಡು ಎಕರೆ ಜಾಗವನ್ನೂ ನೀಡಿದ್ದಾರೆ.ಸಿದ್ಧಪುರುಷರು ಎಂದೇ ಖ್ಯಾತರಾಗಿದ್ದ ಮಹದೇವ ತಾತಾ ಎಂಬುವರು ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು.  ಗ್ರಾಮಸ್ಥರಿಂದ ಪರಾಂಪರಗತವಾಗಿ ಆರಾ„ಸಲಾಗುತ್ತಿದೆ. ದೇವಾಲಯದ ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡುವುದಕ್ಕಿಂತಲೂ ಶತಮಾನಗಳ ಮುಂಚೆಯೇ ದೇವಸ್ಥಾನಗಳು ಇದ್ದವು. ಕಾಲ ಕಾಲಕ್ಕೆ ದೇವಾಲಯ ನವೀಕರಣಗೊಂಡಿದೆ. ಪ್ರಾಚೀನ, ಐತಿಹಾಸಿಕ ದೇವಾಲಯವನ್ನ ಮೈಸೂರು ಜಿಲ್ಲಾಡಳಿತ ಏಕಾಏಕಿ ಧ್ವಂಸಗೊಳಿಸುವ ಮೂಲಕ ಹಿಂದೂ ಧರ್ಮಿಯರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾಧಿಕಾರಿ, ನಂಜನಗೂಡು ತಹಶೀಲ್ದಾರ್ ರಾತ್ರೋರಾತ್ರಿ ಪೊಲೀಸರ ರಕ್ಷಣೆಯೊಂದಿಗೆ ದೇವಸ್ಥಾನ ಒಡೆದು ಹಾಕಿರುವುದು ಖಂಡನೀಯ. ಹಿಂದೂ ಧರ್ಮದ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳ ರಕ್ಷಣೆಯ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಈಗ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಸೂಕ್ತ ರಕ್ಷಣೆ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈಗಲಾದರೂ ಹಿಂದೂ ಧಾರ್ಮಿಕ ಕೇಂದ್ರಗಳನ್ನ ರಕ್ಷಿಸಬೇಕಾಗ ಅಗತ್ಯತೆ ಇದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ವಕ್ಫ್ ಮಾದರಿ ಕಾನೂನನ್ನು ತುರ್ತಾಗಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಹಿಜಾ ವೇದಿಕೆಯ ಸತೀಶ್ ಪೂಜಾರಿ, ಎಲ್. ಶಿವಾಜಿರಾವ್, ಪ್ರಶಾಂತ್, ಉಮೇಶ್ ಕತ್ತಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News