ಆನ್‍ಲೈನ್ ಜೂಜಾಟ ನಿಷೇಧ: ಮೂರು ವರ್ಷ ಶಿಕ್ಷೆ, 1ಲಕ್ಷ ರೂ.ವರೆಗೆ ದಂಡ; ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

Update: 2021-09-17 11:33 GMT

ಬೆಂಗಳೂರು, ಸೆ. 17: `ರಾಜ್ಯದಲ್ಲಿ ಆನ್‍ಲೈನ್, ಮೊಬೈಲ್ ಆ್ಯಪ್ ಮೂಲಕ ನಡೆಯುವ ಜೂಜಾಟ ನಿಷೇಧಿಸುವ `ಕರ್ನಾಟಕ ಪೊಲೀಸು(ತಿದ್ದುಪಡಿ) ವಿಧೇಯಕ-2021'ವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಡಿಸಿದರು. 

ಶುಕ್ರವಾರ ವಿಧಾನಸಭೆಯ ಶಾಸನ ರಚನಾ ಕಲಾಪದಲ್ಲಿ ವಿಧೇಯಕ ಮಂಡಿಸಿದ ಅವರು, ಆನ್‍ಲೈನ್ ಜೂಜು, ಬೆಟ್ಟಿಂಗ್‍ಗಳಿಗೆ ಕಡಿವಾಣ ಹಾಕಲು ಸರಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜೂಜು ಹಾಗೂ ಬೆಟ್ಟಿಂಗ್ ಸೇರಿದಂತೆ ಹಣವನ್ನು ಪಣಕಿಟ್ಟು ಆಡುವ ಅಥವಾ ಇತರೆ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜು ನಿಷೇಧಿಸಲು ಉದ್ದೇಶಿಸಲಾಗಿದೆ.

ಅಲ್ಲದೆ, ಆನ್‍ಲೈನ್ ಜೂಜಾಟ ನಡೆಸುವವರಿಗೆ ದಂಡ ವಿಧಿಸಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆನ್‍ಲೈನ್ ಜೂಜಾಟ ಉದ್ದೇಶಿತ ವಿಧೇಯಕದ ಅನ್ವಯ ಅಪರಾಧವಾಗಿದ್ದು, ಮೂರು ವರ್ಷ ಶಿಕ್ಷೆ, 1 ಲಕ್ಷ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಲಾಟರಿ, ಕುದುರೆ ರೇಸ್ ಈ ವಿಧೇಯಕದ ವ್ಯಾಪ್ತಿಯಲ್ಲಿಲ್ಲ, ಆನ್‍ಲೈನ್ ಜೂಜಾಟ ನಿಷೇಧ ತಿದ್ದುಪಡಿ ಮಸೂದೆಯಡಿ ಲಾಟರಿ ಮತ್ತು ಕುದುರೆ ರೇಸ್‍ಗಳು ಬರುವುದಿಲ್ಲ. ಲಾಟರಿ ಮತ್ತು ಕುದುರೆ ರೇಸ್ ಅನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ಆನ್‍ಲೈನ್ ಜೂಜಾಟವನ್ನು ನಿಷೇಧಿಸಲು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News