ಹಾಸನ: ದೊಡಕೊಂಡಗುಳ ಸಮೀಪ ಭೂಕಂಪನದ ಅನುಭವ; ಆತಂಕದಲ್ಲಿ ಜನತೆ

Update: 2021-09-17 16:33 GMT
ಆತಂಕದಿಂದ ಹೆದರಿ ಹೊರಗೆ ಬಂದ ಸ್ಥಳೀಯರು 

ಹಾಸನ: ನಗರದ ಸಮೀಪ ಇರುವ ತಾಲೂಕಿನ ದೊಡ್ಡಕೊಂಡಗುಳ ಗ್ರಾಮದಲ್ಲಿ ಶುಕ್ರವಾರದಂದು ಸಂಜೆ ಸುಮಾರು 5:10ರ ಸಮಯದಲ್ಲಿ ಭೂಕಂಪವಾದ ಅನುಭವವಾಗಿದೆ.

ಸಂಜೆ ಸಮಯ ಸುಮಾರು 5:10ರ ವೇಳೆ ಭೂಮಿಯಲ್ಲಿ ನಡುಗಿದ ಅನುಭವವಾದಂತೆ ಗ್ರಾಮದ ಕೆಲವರು ಆತಂಕದಿಂದ ಹೆದರಿ ಹೊರಗೆ ಬಂದಿದ್ದಾರೆ. 

4 ರಿಂದ 5 ಸೆಕೆಂಡುಗಳ ಕಾಲ ಭೂಕಂಪನದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ 15 ವರ್ಷಗಳ ಹಿಂದೆ ಇಂತಹ ಅನುಭವವಾಗಿತ್ತು ಎಂದು ಸ್ಥಳೀಯರು ತಿಳಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News