ವಾಣಿಜ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟ

Update: 2021-09-18 13:29 GMT

ಬೆಂಗಳೂರು, ಸೆ. 18: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಇತರೆ ಪರೀಕ್ಷೆಗಳು), ಮಲ್ಲೇಶ್ವರಂ ವತಿಯಿಂದ 2021ರ ಎಪ್ರಿಲ್/ಮೇನಲ್ಲಿ ನಡೆದ ವಾಣಿಜ್ಯ ಪರೀಕ್ಷೆಯ ಫಲಿತಾಂಶವನ್ನು ಸೆ.18ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‍ಸೈಟ್ https://sslc.karnataka.gov.in ನಲ್ಲಿ ಪ್ರಕಟಿಸಲಾಗಿದೆ.

ಸಂಬಂಧಿಸಿದ ಶಾಲೆಗಳ ಲಾಗಿನ್‍ನಲ್ಲಿ ಈಗಾಗಲೇ ಫಲಿತಾಂಶ ಪಟ್ಟಿಯನ್ನು ಅಪ್‍ಲೋಡ್ ಮಾಡಲಾಗಿದ್ದು, ಸಂಬಂಧಿಸಿದ ವಾಣಿಜ್ಯ ಸಂಸ್ಥೆಯವರು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಆಯಾ ವಾಣಿಜ್ಯ ಸಂಸ್ಥೆಗಳ ಪ್ರಕಟಣಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News