ಬೆಂಗಳೂರು: ನೈಟ್ ಕರ್ಫ್ಯೂ ಉಲ್ಲಂಘಿಸಿ ರೇವ್ ಪಾರ್ಟಿ; ಹಲವರು ವಶಕ್ಕೆ

Update: 2021-09-19 12:15 GMT

ಬೆಂಗಳೂರು, ಸೆ.19: ಕೋವಿಡ್ ಮಾರ್ಗಸೂಚಿ ಅನ್ವಯ ರಾತ್ರಿ ಕಫ್ರ್ಯೂ ಉಲ್ಲಂಘಿಸಿ ನಗರದ ಹೊರವಲಯದ ರೆಸಾರ್ಟ್‍ವೊಂದರಲ್ಲಿ ಮೋಜು ಮಸ್ತಿಯ ರೇವ್ ಪಾರ್ಟಿ ಮಾಡುತ್ತಿದ್ದು 30 ಮಂದಿಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದರು.

ಶನಿವಾರ ತಡರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ 30 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 

ಬನ್ನೇರುಘಟ್ಟ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡ ತಮ್ಮನಾಯಕನಹಳ್ಳಿ ಕಾಡಂಚಿನ ಮುತ್ಯಾಲಮಡು ಕಣಿವೆ ಬಳಿಯ ಖಾಸಗಿ ರೆಸಾರ್ಟ್‍ನಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಹಲವು ಯುವಕ-ಯುವತಿಯರು ಸೇರಿ ಗಾಂಜಾ, ಡ್ರಗ್ಸ್ ಸೇವಿಸಿ ನಶೆಯಲ್ಲಿ ತೇಲುತ್ತಾ ಅಶ್ಲೀಲ ನೃತ್ಯ ಮಾಡುತ್ತಿದ್ದರು. 

ಖಚಿತವಾದ ಮಾಹಿತಿಯನ್ನು ಆಧರಿಸಿದ ಪೊಲೀಸರು ಹಠಾತ್ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 30 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದುಕೊಂಡವರೆಲ್ಲರೂ ರೆಸಾರ್ಟ್ ಪಕ್ಕದ ಕಾಡಿನಲ್ಲೇ ಉಳಿದುಕೊಂಡಿದ್ದರು. ಇದರಲ್ಲಿ ಬಹುತೇಕರು ಕೇರಳ ಮೂಲದವರಾಗಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News