ಕೋವಿಡ್ ಪಾಸಿಟಿವಿಟಿ ದರ ಏರಿಕೆಯಾದರೆ ಪ್ರಾಥಮಿಕ ತರಗತಿ ತೆರೆಯುವುದಿಲ್ಲ: ಶಿಕ್ಷಣ ಇಲಾಖೆ

Update: 2021-09-19 13:47 GMT

ಬೆಂಗಳೂರು, ಸೆ.19: ಕೋವಿಡ್ ಸೋಂಕು ಇಳಿಕೆಯಾದರೆ ಅಕ್ಟೋಬರ್ ಮೊದಲ ವಾರದಲ್ಲೇ ಪ್ರಾಥಮಿಕ ತರಗತಿ ಆರಂಭಿಸಲು ಚಿಂತಿಸಲಾಗಿತ್ತು. ಗಣೇಶ ಹಬ್ಬಕ್ಕೂ ಮುನ್ನ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು. ಆದರೆ, ಕಳೆದ ಎರಡು ಮೂರು ದಿನಗಳಿಂದ ಮತ್ತೆ ಏರಿಕೆ ಕಂಡಿದೆ. ಕೊರೋನ ಪಾಸಿಟಿವಿಟಿ ದರ ಹೀಗೆ ಏರಿಕೆಯಾದರೆ ತರಗತಿ ತೆರೆಯುವ ವಿಚಾರ ಮುಂದೂಡಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈಗಾಗಲೇ ಹಂತ ಹಂತವಾಗಿ 6ನೇ ತರಗತಿಯಿಂದ ಕಾಲೇಜು ತರಗತಿಗಳು ಆರಂಭಗೊಂಡಿದ್ದು, ಪಾಠ-ಪ್ರವಚನ ನಡೆಯುತ್ತಿವೆ. ಪ್ರಾಥಮಿಕ ಹಂತದ ಒಂದರಿಂದ 5ನೇ ತರಗತಿಯನ್ನು ಆರಂಭಿಸಲಿಕ್ಕೂ ಖಾಸಗಿ ಶಾಲೆಗಳು ಒತ್ತಾಯಿಸುತ್ತಿವೆ. ಮೂರನೇ ಅಲೆಯ ಬಗ್ಗೆ ಸರಕಾರ ಗಮನ ಹರಿಸುತ್ತಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತ ಟಾಸ್ಕ್ ಫೋರ್ಸ್ ಕೂಡ ತುಂಬಾ ಗಂಭೀರವಾಗಿ ಅಧ್ಯಯನ ಮಾಡುತ್ತಿದೆ.

ಅಧಿವೇಶನ ಮುಗಿದ ನಂತರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ. ಸಮಿತಿ ನೀಡುವ ಸಲಹೆ ಸೂಚನೆ ಮೇರೆಗೆ ತರಗತಿ ಆರಂಭ ಮಾಡುವ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ. ಒಂದು ವೇಳೆ ಕೊರೋನ ಪಾಸಿಟಿವಿಟಿ ದರ ಏರಿಕೆಯಾದರೆ ಪ್ರಾಥಮಿಕ ತರಗತಿ ತೆರೆಯುವ ವಿಚಾರ ಮುಂದೂಡಲಾಗುತ್ತೆ ಎಂದು ಇಲಾಖೆಯ ಮೂಲಗಳು ಸ್ವಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News