ಸೋಮವಾರಪೇಟೆ: ಮರಗಳ ಅಕ್ರಮ ಸಾಗಾಟ; ಓರ್ವನ ಬಂಧನ

Update: 2021-09-19 18:06 GMT

ಸೋಮವಾರಪೇಟೆ: ಮೀಸಲು ಅರಣ್ಯದಲ್ಲಿ ಬೀಟೆ ಹಾಗು ತೇಗದ ಮರಗಳನ್ನು ಕಡಿದು ಅಕ್ರಮ ಸಾಗಾಟಕ್ಕೆ ಸಂಗ್ರಹಿಸಿಟ್ಟಿದ್ದ ನಾಟಗಳನ್ನು ಸೋಮವಾರಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ಈರ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ನಾಕೂರು ಶಿರಂಗಾಲ ಗ್ರಾಮದ ಟಿ.ಎಂ.ಸುಬ್ಬರಾಜು ಬಂಧಿತ ಆರೋಪಿ. ಮಳೂರು ಗ್ರಾಮದ ಎಂ.ಎಸ್.ಸಂದೀಪ, ಟಿ.ಕೆ.ಸುರೇಶ್ ತಲೆಮರೆಸಿಕೊಂಡಿದ್ದಾರೆ. ಸೋಮವಾರಪೇಟೆ ವಲಯ ಹುದುಗೂರು ಶಾಖೆಯ ಯಡವನಾಡು ಮೀಸಲು ಅರಣ್ಯಕ್ಕೆ ಸೇರಿದ ಮಾವಿನಹಳ್ಳ ಎಂಬಲ್ಲಿ ಬೀಟೆ ಮರದ 4 ನಾಟ ಹಾಗು 9 ತೇಗದ ನಾಟಗಳನ್ನು ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ವಲಯಾ ಅರಣ್ಯಾಧಿಕಾರಿ ಶಮಾ ಮಾರ್ಗದರ್ಶನದಲ್ಲಿ  ಉಪವಲಯ ಅರಣ್ಯಾಧಿಕಾರಿ ಎಂ.ಕೆ.ಮನು, ಅರಣ್ಯ ರಕ್ಷಕರಾದ ಎಚ್.ಪಿ.ರಾಜಣ್ಣ, ಬೀಮಣ್ಣ, ಚೇತನ್, ಪ್ರಸಾದ್, ಭರಮಪ್ಪ, ತಿಮ್ಮಯ್ಯ, ಅರಣ್ಯ ವೀಕ್ಷಕ ದಿವಾಕರ್,ದೀಕ್ಷಿತ್, ರವಿ, ವರುಣ್, ಸಂತೋಷ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

18ಎಸ್‍ಪಿಟಿ2-ಸೋಮವಾರಪೇಟೆ ವಲಯ ಹುದುಗೂರು ಶಾಖೆಯ ಯಡವನಾಡು ಮೀಸಲು ಅರಣ್ಯಕ್ಕೆ ಸೇರಿದ ಮಾವಿನಹಳ್ಳ ಎಂಬಲ್ಲಿ ಬೀಟೆ ಮರದ 4 ನಾಟ ಹಾಗು 9 ತೇಗದ ನಾಟಗಳನ್ನು ಅಕ್ರಮವಾಗಿ ಕಡಿದು ಸಂಗ್ರಹಿಸಿಟ್ಟಿರುವುದನ್ನು ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಎಂ.ಕೆ.ಮನು, ಅರಣ್ಯ ರಕ್ಷಕರಾದ ಎಚ್.ಪಿ.ರಾಜಣ್ಣ, ಬೀಮಣ್ಣ, ಚೇತನ್, ಪ್ರಸಾದ್, ಭರಮಪ್ಪ, ತಿಮ್ಮಯ್ಯ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News