ಮೈಸೂರು ದಸರಾ: ಮರಳಿನ ಮೂಟೆಯ ತಾಲೀಮು ಆರಂಭ

Update: 2021-09-20 09:05 GMT

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಆನೆಗೆ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಯಿತು.

ಸುಮಾರು ಆರು ಕೆ.ಜಿ.ತೂಕದ ಮರಳುಮೂಟೆಯನ್ನು ಅಭಿಮನ್ಯು ಆನೆ ಮೇಲೆ ಹಾಕಿ ಅರಮನೆಯೊಳಗೆ ತಾಲೀಮು ನಡೆಸಲಾಯಿತು.ಇದಕ್ಕೂ ಮೊದಲು ಅರಮನೆಯೊಳಗೆ ಡಿಸಿಎಫ್ ಕರಿಕಾಳನ್ ನೇತೃತ್ವದಲ್ಲಿ ಗಜಪಡೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕ್ಯಾಪ್ಟನ್ ಅಭಿಮನ್ಯು ಆನೆ ಜೊತೆಗೆ ಕಾವೇರಿ, ವರಲಕ್ಷ್ಮಿ, ಅಶ್ವತ್ಥಾಮ ಸೇರಿದಂತೆ ಎಂಟು ಆನೆಗಳು ಹೆಜ್ಜೆಹಾಕಿದವು.

ಕ್ಯಾಪ್ಟನ್  ಅಭಿನ್ಯು ದಸರಾ ಮೆರವಣಿಗೆ ವರೆಗೆ 700 ಕೆ.ಜಿ. ಬಾರದ ಶ್ರೀಚಾಮುಂಡೇಶ್ವರಿ ತಾಯಿ ಹೊತ್ತ ಚಿನ್ನದ ಅಂಬಾರಿ ಹೊರಲು ಪೂರ್ವಸಿದ್ದತೆ ಎಂಬಂತೆ ಮರಳಿನ ಮೂಟೆಗಳನ್ನು ಹೊರಿಸಿ ತಾಲೀಮು ನಡೆಸಲಾಯಿತು.

ದಸರಾ ಆನೆಗಳಿಗೆ ಅರಮನೆಯೊಳಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ.

ಇದೇ ವೇಳೆ ಮಾತನಾಡಿದ ಡಿಸಿಎಫ್ ಕರಿಕಾಳನ್, ಕ್ಯಾಪ್ಟನ್ ಅಭಿಮನ್ಯು ಆನೆಗೆ ಆರು ನೂರು ಕೆ.ಜಿ. ಬಾರದ ಮರಳು ಮೂಟೆಯನ್ನು ಹೊರಿಸಿ ತಾಲೀಮು ಮಾಡಲಾಗುತ್ತಿದ್ದು, ಅರಮನೆಯೊಳಗೆ ದಿನಕ್ಕೆ7 ಕಿ.ಮಿ. ನಷ್ಟು ತಾಲೀಮು ನಡೆಸಲಾಗುವುದು ಎಂದು ಹೇಳಿದರು.

ಗಜಪಡೆಗಳನ್ನು ರಸ್ತೆಯಲ್ಲಿ ಕರೆದುಕೊಂಡು ಹೋದರೆ ಒಳ್ಳೆಯದು. ನಮ್ಮ ಇಲಾಖೆ ಕಾರ್ಯ ಕಾರಿ ಸಮಿತಿ ತೀರ್ಮಾನದಂತೆ ಮುಂದಿನ ದಿನಗಳಲ್ಲಿ ತಾಲೀಮು ನಡೆಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News