ಸಿಇಟಿ ಪರೀಕ್ಷೆ ಫಲಿತಾಂಶ : ಐದು ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆದು ದಾಖಲೆ ಬರೆದ ಮೇಘನ್

Update: 2021-09-20 17:51 GMT
 ಮೇಘನ್

ಬೆಂಗಳೂರು : 2020-2021ನೆ ಸಾಲಿನ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಸೋಮವಾರ ಪ್ರಕಟವಾಗಿದೆ.

ಸಿಇಟಿ ಪರೀಕ್ಷೆ ಫಲಿತಾಂಶದ ವಿಭಾಗವಾರು ಅರ್ಹತೆ ಪಡೆದವರ ವಿವರ ಇಲ್ಲಿದೆ

ಇಂಜಿನಿಯರಿಂಗ್ ವಿಭಾಗದಲ್ಲಿ 1,83,231, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸು ವಿಭಾಗದಲ್ಲಿ 1,55,910, ಪಶುವೈದ್ಯಕೀಯ (ವೆಟರ್ನರಿ) ವಿಭಾಗದಲ್ಲಿ 1,52,518, ಇನ್ನು ಬಿ-ಫಾರ್ಮಾ ಕೋರ್ಸಿನಲ್ಲಿ 1,86,638 ಹಾಗೂ ಡಿ-ಪಾರ್ಮಾ ಕೋರ್ಸುಗಳಲ್ಲಿ 1,86,638 ಅಭ್ಯರ್ಥಿಗಳು ರಾಂಕ್ ಪಡೆದು ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. 31,460 ಅಭ್ಯರ್ಥಿಗಳು ಪಿಸಿಎಂ, 3,836 ಅಭ್ಯರ್ಥಿಗಳು ಪಿಸಿಬಿಯಲ್ಲಿ ಹಾಗೂ 1,58,151 ಅಭ್ಯರ್ಥಿಗಳು ಪಿಸಿಎಂ-ಪಿಸಿಬಿಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

55ಕ್ಕೂ ಹೆಚ್ಚು ಅಂಕ ಗಳಿಸಿದವರು: ಭೌತಶಾಸ್ತ್ರ ವಿಷಯದಲ್ಲಿ ಯಾವ ಅಭ್ಯರ್ಥಿಯೂ 55ಕ್ಕೂ ಹೆಚ್ಚಿನ ಅಂಕ ಪಡೆದಿಲ್ಲ. ಆದರೆ ರಸಾಯನಶಾಸ್ತ್ರದಲ್ಲಿ 3, ಗಣಿತದಲ್ಲಿ 6 ಹಾಗೂ ಜೀವಿಶಾಸ್ತ್ರ ವಿಷಯದಲ್ಲಿ 50 ವಿದ್ಯಾರ್ಥಿಗಳು 60 ಅಂಕ ಗಳಿಸಿದ್ದಾರೆ ಎಂದು ಅವರು ತಿಳಿಸಿದರು.

6 ಅಂಕ ಕೃಪಾಂಕ: ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರಕ್ಕೆ ತಲಾ 3 ಅಂಕಗಳನ್ನು ಕೃಪಾಂಕವನ್ನಾಗಿ ನೀಡಲಾಗಿದೆ. ಒಟ್ಟು 6 ಅಂಕಗಳು ಅಭ್ಯರ್ಥಿಗಳಿಗೆ ಸಿಕ್ಕಿವೆ.  ಇದೇ ವೇಳೆ, ಅಂಕಪಟ್ಟಿ ಕೊಡದೇ ಇರುವ 6,000 ಅಭ್ಯರ್ಥಿಗಳು ಸೇರಿ ಒಟ್ಟು 7,000 ವಿದ್ಯಾರ್ಥಿಗಳಿಗೆ ರಾಂಕ್ ತಡೆ ಹಿಡಿಯಲಾಗಿದೆ ಎಂದು ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.

ರ್‍ಯಾಂಕ್ ತಡೆಹಿಡಿಯಲ್ಪಟ್ಟ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಇ-ಮೇಲ್ keauthority-ka@nic.in ಮೂಲಕ ಮೂಲಕ ಅಥವಾ ಖುದ್ದಾಗಿ ಸಲ್ಲಿಸಿ ತಮ್ಮ ರ್‍ಯಾಂಕ್‍ಗಳನ್ನು ಪಡೆಯಬಹುದಾಗಿದೆ. ರ್‍ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆಯ ನಂತರ ಅರ್ಹತೆಯನ್ನು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.

ಸೌಲಭ್ಯ ಕೇಂದ್ರಗಳ ಸ್ಥಾಪನೆ-ಸೆ.30ರಿಂದ ದಾಖಲಾತಿ ಪರಿಶೀಲನೆ: ಮೂಲ ದಾಖಲಾತಿಗಳ ಪರಿಶೀಲನೆಗಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಸೌಲಭ್ಯ ಕೇಂದ್ರ’ಗಳನ್ನು ತೆರೆಯಲಾಗುವುದು. ಸೆ.30ರಿಂದ ದಾಖಲಾತಿ ಪರಿಶೀಲನೆಯನ್ನು ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಹತ್ತಿರದ ಸೌಲಭ್ಯ ಕೇಂದ್ರಗಳಿಗೆ ಪರಿಶೀಲನೆಗೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಅಗತ್ಯವಿರುವ ಎಲ್ಲ ಮೂಲ ದಾಖಲಾತಿಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಮೂಲ ದಾಖಲಾತಿಗಳ ವಿವರಗಳನ್ನು ನೀಡಲಾಗಿದೆ. ಈ ಸೌಲಭ್ಯ ಕೇಂದ್ರಗಳಲ್ಲಿ ಆನ್‍ಲೈನ್ ವೆರಿಫಿಕೇಷನ್ ಸಾಫ್ಟ್‍ವೇರ್ ಮೂಲಕ ದಾಖಲಾತಿಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಯುಜಿನೀಟ್-2021ರ ಫಲಿತಾಂಶ ಬಂದ ನಂತರ ಯುಜಿನೀಟ್-2021 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತ್ತು ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸುಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು. ಹಾಗೆಯೇ ಎನ್‍ಎಟಿಎ-2021 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ರ್‍ಯಾಂಕ್ ಅನ್ನು ನಂತರ ಪ್ರಕಟಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಹೇಳಿದರು.

ಯಾವುದಾದರೂ ಅರ್ಹ ಅಭ್ಯರ್ಥಿಗೆ ರ್‍ಯಾಂಕ್ ನೀಡದೆ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ಎರಡನೆ ವರ್ಷದ ಪಿಯುಸಿ ಫೋಟೋ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ರ್‍ಯಾಂಕ್ ಅನ್ನು ಪಡೆಯಬಹುದು ಎಂದು ಅವರು ತಿಳಿಸಿದರು.

► ಇಂಜಿನಿಯರಿಂಗ್ ರ್‍ಯಾಂಕ್ ಅಭ್ಯರ್ಥಿಗಳು

1ನೆ ರ್‍ಯಾಂಕ್-ಮೇಘನ್ ಎಚ್.ಕೆ.(ಮೈಸೂರು)

2ನೆ ರ್‍ಯಾಂಕ್- ಪ್ರೇಮಾಂಕುರ್ ಚಕ್ರವರ್ತಿ(ಬೆಂಗಳೂರು)

3ನೆ ರ್‍ಯಾಂಕ್-ಬಿ.ಎಸ್.ಅನಿರುದ್ಧ್(ಬೆಂಗಳೂರು)

4ನೆ ರ್‍ಯಾಂಕ್-ನಿರಂಜನ ರೆಡ್ಡಿ ಬಿ.ಎಸ್.(ಬೆಂಗಳೂರು)

5ನೆ ರ್‍ಯಾಂಕ್-ಆದಿತ್ಯ ಸಿ.ಆರ್.(ಬೆಂಗಳೂರು)

6ನೆ ರ್‍ಯಾಂಕ್-ಕಾರ್ತಿಕ್ ಅಗರ್‍ವಾಲ್(ಬೆಂಗಳೂರು)

7ನೆ ರ್‍ಯಾಂಕ್-ವೀರೇಶ್ ಬಿ.ಪಾಟೀಲ್(ಬೆಂಗಳೂರು)

8ನೆ ರ್‍ಯಾಂಕ್-ಅಂಕಿತಾ ಹರ್ಷ ಮೂರ್ತಿ(ಬೆಂಗಳೂರು)

9ನೆ ರ್‍ಯಾಂಕ್-ಆದಿತ್ಯ ಪ್ರಭಾಷ್(ಬೆಂಗಳೂರು)

10ನೆ ರ್‍ಯಾಂಕ್-ವಿನೀತ್ ಭಟ್(ಬೆಂಗಳೂರು)

► ಬಿಎನ್‍ವೈಎಸ್ ರ್‍ಯಾಂಕ್ ಅಭ್ಯರ್ಥಿಗಳು

1ನೆ ರ್‍ಯಾಂಕ್-ಮೇಘನ್ ಎಚ್.ಕೆ.(ಮೈಸೂರು)

2ನೆ ರ್‍ಯಾಂಕ್- ವರುಣ್ ಆದಿತ್ಯ(ಬೆಂಗಳೂರು)

3ನೆ ರ್‍ಯಾಂಕ್-ರೀಥಮ್ ಬಿ.(ಮಂಗಳೂರು)

5ನೆ ರ್‍ಯಾಂಕ್-ಮುಹಮ್ಮದ್ ಕೈಫ್ ಕೆ.ಮುಲ್ಲಾ(ಬೆಳಗಾವಿ)

6ನೆ ರ್‍ಯಾಂಕ್-ಎಂ.ಹಯವದನ ಸುಬ್ರಹ್ಮಣ್ಯ(ಬಳ್ಳಾರಿ)

7ನೆ ರ್‍ಯಾಂಕ್-ನಂದನಾ ಎನ್.ಹೆಗ್ಡೆ

8ನೆ ರ್‍ಯಾಂಕ್-ಸಾತ್ವಿಕ್ ಜಿ.ಭಟ್(ಮೂಡಬಿದಿರೆ)

9ನೆ ರ್‍ಯಾಂಕ್-ನಿಶಾತ್ ಫಾತಿಮಾ(ಬೀದರ್)

10ನೆ ರ್‍ಯಾಂಕ್-ಜಿ.ಶ್ರೀಸಂಜೀತ್(ಬೆಂಗಳೂರು)

► ಬಿಎಸ್ಸಿ ಕೃಷಿ ರ್‍ಯಾಂಕ್ ಅಭ್ಯರ್ಥಿಗಳು

1ನೆ ರ್‍ಯಾಂಕ್-ಮೇಘನ್ ಎಚ್.ಕೆ.(ಮೈಸೂರು)

2ನೆ ರ್‍ಯಾಂಕ್-ರೀಥಮ್ ಬಿ.(ಮಂಗಳೂರು)

3ನೆ ರ್‍ಯಾಂಕ್-ಆದಿತ್ಯ ಪ್ರಭಾಷ್(ಬೆಂಗಳೂರು)

4ನೆ ರ್‍ಯಾಂಕ್-ತೇಜಸ್(ಮಂಗಳೂರು)

5ನೆ ರ್‍ಯಾಂಕ್- ಸುಜ್ಞಾನ್ ಆರ್.ಶೆಟ್ಟಿ(ಮೂಡಬಿದಿರೆ)

6ನೆ ರ್‍ಯಾಂಕ್- ಅನಿರುದ್ಧ ರಾವ್(ಬೆಂಗಳೂರು)

7ನೆ ರ್‍ಯಾಂಕ್-ಸಂಜನಾ ಕಾಮತ್ ಪಂಚಮಲ್(ಮಂಗಳೂರು)

8ನೆ ರ್‍ಯಾಂಕ್-ವೀರೇಶ್ ಬಿ.ಪಾಟೀಲ್(ಬೆಂಗಳೂರು)

9ನೆ ರ್‍ಯಾಂಕ್-ಪೂರ್ವಿ ಎಚ್.ಸಿ.(ಬೆಂಗಳೂರು)

10ನೆ ರ್‍ಯಾಂಕ್-ಕೆ.ವಿ.ಪ್ರಣವ್(ಬೆಂಗಳೂರು)

► ಬಿವಿಎಸ್ಸಿ(ಪಶುಸಂಗೋಪನೆ) ರ್‍ಯಾಂಕ್ ಅಭ್ಯರ್ಥಿಗಳು

1ನೆ ರ್‍ಯಾಂಕ್-ಮೇಘನ್ ಎಚ್.ಕೆ.(ಮೈಸೂರು)

2ನೆ ರ್‍ಯಾಂಕ್-ವರುಣ್ ಆದಿತ್ಯ(ಬೆಂಗಳೂರು)

3ನೆ ರ್‍ಯಾಂಕ್- ರೀಥಮ್ ಬಿ.(ಮಂಗಳೂರು)

5ನೆ ರ್‍ಯಾಂಕ್-ಮುಹಮ್ಮದ್ ಕೈಫ್ ಕೆ.ಮುಲ್ಲಾ(ಬೆಳಗಾವಿ)

6ನೆ ರ್‍ಯಾಂಕ್-ಎಂ.ಹಯವದನ ಸುಬ್ರಹ್ಮಣ್ಯ(ಬಳ್ಳಾರಿ)

7ನೆ ರ್‍ಯಾಂಕ್-ಸಾತ್ವಿಕ್ ಜಿ.ಭಟ್(ಮೂಡಬಿದಿರೆ)

8ನೆ ರ್‍ಯಾಂಕ್-ನಂದನಾ ಎನ್.ಹೆಗ್ಡೆ

9ನೆ ರ್‍ಯಾಂಕ್-ನಿಶಾತ್ ಫಾತಿಮಾ(ಬೀದರ್)

10ನೆ ರ್‍ಯಾಂಕ್-ಜಿ.ಶ್ರೀಸಂಜೀತ್(ಬೆಂಗಳೂರು)

► ಬಿ-ಫಾರ್ಮಾ ಮತ್ತು ಡಿ-ಫಾರ್ಮಾ ರ್‍ಯಾಂಕ್ ಅಭ್ಯರ್ಥಿಗಳು

1ನೆ ರ್‍ಯಾಂಕ್-ಮೇಘನ್ ಎಚ್.ಕೆ.(ಮೈಸೂರು)

2ನೆ ರ್‍ಯಾಂಕ್-ಪ್ರೇಮಾಂಕೂರ್ ಚಕ್ರವರ್ತಿ-(ಬೆಂಗಳೂರು)

3ನೆ ರ್‍ಯಾಂಕ್-ಬಿ.ಎಸ್.ಅನಿರುದ್ಧ್(ಬೆಂಗಳೂರು)

4ನೆ ರ್‍ಯಾಂಕ್-ನಿರಂಜನ ರೆಡ್ಡಿ ಬಿ.ಎಸ್.(ಬೆಂಗಳೂರು)

5ನೆ ರ್‍ಯಾಂಕ್-ವರುಣ್ ಆದಿತ್ಯ(ಬೆಂಗಳೂರು)

6ನೆ ರ್‍ಯಾಂಕ್-ಆದಿತ್ಯ ಸಿ.ಆರ್.(ಬೆಂಗಳೂರು)

7ನೆ ರ್‍ಯಾಂಕ್-ಕಾರ್ತೀಕ್ ಅಗರವಾಲ್(ಬೆಂಗಳೂರು)

8ನೆ ರ್‍ಯಾಂಕ್-ಮುಹಮ್ಮದ್ ಕೈಫ್ ಕೆ.ಮುಲ್ಲಾ(ಬೆಳಗಾವಿ)

10ನೆ ರ್‍ಯಾಂಕ್-ರೀಥಮ್ ಬಿ.(ಮಂಗಳೂರು)

ಹೊಸ ದಾಖಲೆ ಬರೆದ ಮೈಸೂರಿನ ಮೇಘನ್ ಎಚ್.ಕೆ

ಮೈಸೂರಿನ ಪ್ರಮಥಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಎಚ್.ಕೆ.ಮೇಘನ್ ಎಂಜಿನಿಯರಿಂಗ್, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ, ಕೃಷಿ, ಪಶುಸಂಗೋಪನೆ, ಬಿ.ಫಾರ್ಮಾ-ಡಿ.ಫಾರ್ಮ ವಿಭಾಗಗಳಲ್ಲೂ ಮೊದಲ ರಾಂಕ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ರೀತಿ ಒಬ್ಬನೇ ವಿದ್ಯಾರ್ಥಿ ಎಲ್ಲ ವಿಭಾಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೊಸ ದಾಖಲೆಯಾಗಿದೆ. ಈ ಕಾರಣಕ್ಕಾಗಿ ಮೇಘನ್ ಅವರನ್ನು ನಾನು ಅಭಿನಂದಿಸುತ್ತೇನೆ.

ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ

ವೈದ್ಯನಾಗುವ ಆಸೆ ಹೊಂದಿದ್ದೇನೆ:

ಸಿಇಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುತ್ತೇನೆ ಎಂಬ ವಿಶ್ವಾಸ ಇತ್ತು. ಆದರೆ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಬರುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ, ಈ ಫಲಿತಾಂಶ  ಹೆಚ್ಚು ಸಂತೋಷ ತಂದಿದೆ. ವೈದ್ಯನಾಗಬೇಕು ಎಂಬ ಆಸೆ ನನ್ನದು.

ದಿನಕ್ಕೆ ಹತ್ತು ಗಂಟೆ ಓದುತ್ತಿದ್ದೆ. ಎಲ್ಲಾ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ಎಷ್ಟು ಬೇಕೊ ಅಷ್ಟು ಓದುತ್ತಿದೆ 

- ಮೇಘನ್ ಎಚ್.ಕೆ. 

ಭಾರತೀಯ ಸಾಗರೋತ್ತರ ಅಭ್ಯರ್ಥಿಯ ಫಲಿತಾಂಶಕ್ಕೆ ತಡೆ

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ನಾಲ್ಕನೆ ರ್ಯಾಂಕ್, ಪಶುವೈದ್ಯ ವಿಭಾಗದಲ್ಲಿ ನಾಲ್ಕನೆ ರ್ಯಾಂಕ್ ಮತ್ತು ಬಿ.ಫಾರ್ಮಾ ಹಾಗೂ ಡಿ.ಫಾರ್ಮಾ ವಿಭಾಗದಲ್ಲಿ 9ನೆ ರ್ಯಾಂಕ್ ಪಡೆದಿರುವ ಭಾರತೀಯ ಸಾಗರೋತ್ತರ ಅಭ್ಯರ್ಥಿಯೊಬ್ಬರ ಫಲಿತಾಂಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಭಾರತೀಯ ಸಾಗರೋತ್ತರ ಅಭ್ಯರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಅವಕಾಶ ಕಲ್ಪಿಸುವ ವಿಚಾರದ ಕುರಿತು ಹೈಕೋರ್ಟ್‍ನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೆ ತೀರ್ಪು ಹೊರಬೀಳದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News