ಬಗರ್ ಹುಕುಂ ಅರ್ಜಿಗಳ ವರ್ಗಾವಣೆಗೆ ಸೂಚನೆ: ಸಚಿವ ಆರ್.ಅಶೋಕ್

Update: 2021-09-20 15:22 GMT

ಬೆಂಗಳೂರು, ಸೆ. 20: `ನೂತನವಾಗಿ ರಚನೆಯಾಗಿರುವ ಹೊಸ ತಾಲೂಕುಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಅರ್ಜಿಗಳನ್ನು ಕೂಡಲೇ ವರ್ಗಾವಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ರೂಪಕಲಾ ಎಂ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ಕೆಜಿಎಫ್ ತಾಲೂಕಿನಲ್ಲಿ ನಮೂನೆ-53ರಲ್ಲಿ ಒಟ್ಟು 3,134 ಅರ್ಜಿಗಳು ಹಾಗೂ ನಮೂನೆ-57ರಲ್ಲಿ ಒಟ್ಟು 4,271 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇನ್ನು ಹತ್ತು ದಿನಗಳ ಒಳಗೆ ಎಲ್ಲ ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕುಗಳಿಗೆ ವರ್ಗಾವಣೆ ಮಾಡಲಾಗುವುದು' ಎಂದರು.

`ಒಂದು ವೇಳೆ ಕೆಲ ತಾಲೂಕುಗಳಲ್ಲಿ ನಮೂನೆ-53 ಅಥವಾ 57ರಲ್ಲಿ ನೀಡಿದ್ದ ಅರ್ಜಿಗಳು ಕಳೆದುಹೋಗಿದ್ದರೆ ಕಂದಾಯ ಇಲಾಖೆಯಲ್ಲಿನ ದಾಖಲೆಗಳನ್ನು ಆಧರಿಸಿ ಹೊಸದಾಗಿ ಅರ್ಜಿದಾರರಿಂದ ದಾಖಲೆಗಳನ್ನು ಪಡೆದು ಸಕ್ರಮಿಕರಣ ಸಮಿತಿ ಮುಂದೆ ಮಂಡಿಸಲು ಸೂಚನೆ ನೀಡಲಾಗುವುದು' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News