ಐದು ಪದಕಗಳನ್ನು ಮುಡಿಗೇರಿಸಿಕೊಂಡ ಕೆಎಸ್ಸಾರ್ಟಿಸಿ

Update: 2021-09-20 15:29 GMT

ಬೆಂಗಳೂರು, ಸೆ.20: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇವೆಯನ್ನು ಪರಿಗಣಿಸಿ, ನಿಗಮಕ್ಕೆ 5 ವಿಭಾಗಗಳಲ್ಲಿ “ಪಿಆರ್ ಸಿಐ ಎಕ್ಸಲೆನ್ಸ್” ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಭಾರತೀಯ ಸಾರ್ವಜನಿಕ ಸಂಪರ್ಕ ಮಹಾಮಂಡಳಿ ಹಾಗೂ ವಿಶ್ವ ಸಂವಹನ ಮಂಡಳಿಯ ಸಹಯೋಗದಲ್ಲಿ 15ನೇ ವಿಶ್ವ ಸಾರ್ವಜನಿಕ ಸಂಪರ್ಕ ಸಮ್ಮೇಳನವನ್ನು ಇದೇ ಸೆ.18ರಂದು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಗೋವಾ ಸರಕಾರದ ಕಲೆ ಮತ್ತು ಸಂಸ್ಕøತಿ, ಬುಡಕಟ್ಟು ಕಲ್ಯಾಣ ಇಲಾಖೆಯ ಸಚಿವ ಗೋವಿಂದಗೌಡೆ ಕೆಎಸ್‍ಆರ್‍ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಾರ್ವಜನಿಕ ವಲಯದಲ್ಲಿ ಕೋವಿಡ್ ನಿರ್ವಹಣೆಗೆ ಬೆಳ್ಳಿ ಪದಕ, ಅತ್ಯುತ್ತಮ ಸಾರ್ವಜನಿಕ ಉದ್ದಿಮೆ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿನ ಉಪಕ್ರಮಗಳ ಅನುಷ್ಠಾನಕ್ಕೆ ಕಂಚಿನ ಪದಕ, ಆರೋಗ್ಯ ರಕ್ಷಣೆ ಸಂವಹನ ಸಾಕ್ಷ್ಯಚಿತ್ರಗಳಿಗೆ ಕಂಚಿನ ಪದಕ, ‘ಸಾರಿಗೆ ಸಂಪದ’ ಆಂತರಿಕ ನಿಯತಕಾಲಿಕೆಗೆ ಚಿನ್ನದ ಪದಕ, ಕೋವಿಡ್-19 ಸಮಯದಲ್ಲಿ ನೂತನ ಗ್ರಾಹಕ ಸ್ನೇಹಿ ಉಪಕ್ರಮಗಳ ವಿಭಾಗಕ್ಕೆ  ಚಿನ್ನದ ಪದಕವು ನಿಗಮಕ್ಕೆ ಲಭಿಸಿದೆ.

ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೆಎಸ್ಸಾರ್ಟಿಸಿ  ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಮಾತನಾಡಿ, ‘ಕೋವಿಡ್ ಅವಧಿಯಲ್ಲಿಯು ಸಹ ನಿಗಮವು ಕೈಗೊಂಡ ಸಾರ್ವಜನಿಕ ಸ್ನೇಹಿ ಉಪಕ್ರಮಗಳ ಬಗ್ಗೆ ತಿಳಿಸಿದರು. ಹಾಗೆಯೇ ಈ ನಿಟ್ಟಿನಲ್ಲಿ ನಿಗಮದ ಸಿಬ್ಬಂದಿಗಳ ಪರಿಶ್ರಮವನ್ನು ಪ್ರಶಂಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News