ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರವಾಗಿ ಜಾರಿ ಮಾಡುವುದು ಸರಿಯಲ್ಲ: ವಿಶ್ರಾಂತ ಕುಲಪತಿಗಳ ವೇದಿಕೆ ಆಗ್ರಹ

Update: 2021-09-20 15:44 GMT

ಮೈಸೂರು,ಸೆ.20: ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ವಿಸ್ತೃತ ಚರ್ಚೆಗಳಾಗಬೇಕಿದೆ. ಹಾಗಾಗಿ ಆತುರವಾಗಿ ಜಾರಿ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಆಗ್ರಹಿಸಿದೆ.

ಈ ಸಂಬಂಧ ನಗರದ ವಿಜ್ಞಾನ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ  ವೇದಿಕೆ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಸಾಕಷ್ಟು ನ್ಯೂನತೆಗಳಿವೆ. ಜೊತೆಗೆ ಅಷ್ಟೇ ಉತ್ತಮ ಗುಣಗಳನ್ನು ಹೊಂದಿದೆ. ಆದರೆ ನ್ಯೂನತೆಗಳ ಬಗ್ಗೆ  ಶಿಕ್ಷಣ ತಜ್ಞರು, ಪೋಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕವಾಗಿ ವಿಸ್ತøತ ಚರ್ಚೆಗಳಾಗಬೇಕು, ಆತುರವಾಗಿ ಜಾರಿಗೆ ತರುವುದು ಸರಿಯಲ್ಲ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಮತ್ತು  ಮೈಸೂರು ವಿಶ್ವವಿದ್ಯಾನಿಲಯದ  ಸಂಯುಕ್ತಾಶ್ರಯದಲ್ಲಿ ಒಂದು ಸಮಾವೇಶವನ್ನು ನಡೆಸುತ್ತೇವೆ.  ಈ ಸಮಾವೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಬಗ್ಗೆ ವಿಸ್ತøತ ಚರ್ಚೆ ನಡೆಸಲಾಗುವುದು. ಈ ವಿಚಾರ ಸಂಕಿರಣವನ್ನು ಕರ್ನಾಟಕದ ರಾಜ್ಯಪಾಲರು ಉದ್ಘಾಟಿಸಲಿದ್ದು, ಕುಲಪತಿಗಳು, ಕಾಲೆಜು ಪ್ರಾಂಶುಪಾಲರು, ಸ್ನಾತಕೋತ್ತರ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿ ಸರ್ಜ್ ಅಂಡ್ ಸೆಲೆಕ್ಷನ್ ಕಮಿಟಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರನ್ನು ನೇಮಕ ಮಾಡಿರುವುದ ಸರಿಯಾದ ಕ್ರಮವಲ್ಲ, ಕರಾಮುವಿವಿ ಕುಲಪತಿಗಳು ಎಂಜಿನಿಯರಿಂಗ್ ಹಿನ್ನೆಲೆ ಹೊಂದಿದ್ದಾರೆ. ಅವರಿಗೂ ರಾಜೀವ್ ಗಾಂಧಿ ಆರೋಗ್ಯ ವಿವಿಗೂ ಏನು ಸಂಬಂಧ. ಯಾವುದೇ ವಿವಿಯ ಸರ್ಚ್ ಕಮಿಟಿಗೆ ನೇಮಕ ಮಾಡುವ ಮುನ್ನ ಆಯಾ ಕ್ಷೇತ್ರದ ಪರಿಣಿತರನ್ನೇ ಆಯ್ಕೆ ಮಾಡಬೇಕು. ಈ ಬಗ್ಗೆ ರಾಜ್ಯಪಾಲರು ಹಾಗೂ ಸಿಎಂಗೆ ಪತ್ರ ಬರೆದಿದ್ದು, ನೇಮಕ ಆದೇಶಕ್ಕೆ ತಡೆ ನೀಡಬೇಕೆಂದು ಒತ್ತಾಯಿಸಿಲಾಗಿದೆ ಎಂದರು.

ಈಗಾಗಲೇ ಇರುವ ಹಾಲಿ ಕುಲಪತಿಗಳನ್ನು ಸರ್ಚ್ ಕಮಿಟಿಗೆ ನೇಮಕ ಮಾಡುವ ಪ್ರವೃತಿಯನ್ನು ಕೈಬಿಡಬೇಕು. ಹಾಲಿ ಕುಲಪತಿಗಳಾದರೇ ಅವರಿಗೆ ನಿಷ್ಪಕ್ಷಪಾತವಾಗಿ ತೀರ್ಮಾನಗಳನ್ನ ತೆಗೆದುಕೊಳ್ಳಲಾಗದು. ಅವರು ಸರ್ಕಾರದ ಮರ್ಜೆಯಲ್ಲೇ ಇರುತ್ತಾರೆ. ಅದ್ದರಿಂದ ಕುಲಪತಿಗಳ ಆಯ್ಕೆ ಸಮಿತಿಗೆ ವಿಶ್ರಾಂತ ಕುಲಪತಿಗಳನ್ನೇ ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಬೇಕಿದೆ ಎಂದು ಪೆÇ್ರ. ರಂಗಪ್ಪ ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್.ಎನ್.ಹೆಗಡೆ ಹಾಗೂ ಪ್ರೊ.ಸಿ.ಎನ್.ನಿರಂಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News