ನಾಳೆ ಅಮೆರಿಕಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ, ಅಫ್ಘಾನ್ ಬಿಕ್ಕಟ್ಟು, ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ

Update: 2021-09-22 06:04 GMT

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ(ಬುಧವಾರ, ಸೆ.22)ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಕೋವಿಡ್ -19 ಬಳಿಕ ಇದು ಅವರ ಮೊದಲ ಅಮೆರಿಕಾ ಪ್ರವಾಸವಾಗಿದೆ. ಅಮೆರಿಕದ ಭೇಟಿಯ ವೇಳೆ ಅಧ್ಯಕ್ಷ ಜೋ ಬೈಡನ್ ಅವರನ್ನು ಮೊದಲ ಬಾರಿ ಭೇಟಿಯಾಗಲಿದ್ದಾರೆ. ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳ ಜೊತೆ ಸಭೆ ನಡೆಸಲಿದ್ದಾರೆ. ಕ್ವಾಡ್ ದೇಶಗಳ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬುಧವಾರ ಭಾರತದಿಂದ ಹೊರಡಲಿರುವ ಪ್ರಧಾನಿ ಮೋದಿ ಸೆಪ್ಟಂಬರ್ 26ರಂದು ದೇಶಕ್ಕೆ ವಾಪಸಾಗಲಿದ್ದಾರೆ. ಜೋ ಬೈಡನ್ ಹಾಗೂ ಮೋದಿ ಅವರು ಈಗಾಗಲೇ ಜಿ 7 ಶೃಂಗಸಭೆ, ಕ್ವಾಡ್ ಶೃಂಗಸಭೆ, ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ವರ್ಚಯಲ್ ಸಭೆ ನಡೆಸಿದ್ದಾರೆ. ಇದೀಗ ಮೊದಲ ಬಾರಿ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದಾರೆ.

ಮೋದಿ-ಬೈಡನ್  ಅವರು ಭದ್ರತೆ, ರಕ್ಷಣೆ ಹಾಗೂ ವ್ಯಾಪಾರ ವೃದ್ಧಿ ಬಗ್ಗೆ ಸಭೆ ನಡೆಸಲಿದ್ದಾರೆ. ಅಮೆರಿಕದ ಉಪಾಧ್ಯಕ್ಷೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ಭೇಟಿ  ಮಾಡಿ ಉಭಯ ದೇಶಗಳ ನಡುವಿನ ವ್ಯಾಪಾರ ಮಟ್ಟದ ಸಂವಾದಗಳನ್ನು ನಡೆಸುತ್ತಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News