ಮೈಸೂರು: ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇರಿಗೆ ಬಾಂಬ್ ಬೆದರಿಕೆ

Update: 2021-09-22 09:41 GMT

ಮೈಸೂರು: ನಗರದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಪೊಲೀಸರಿಗೆ ಪತ್ರ ಬಂದಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ನಗರದ ದೇವರಾಜ ಅರಸು ರಸ್ತೆ ಪಕ್ಕದಲ್ಲಿರುವ ಬಿದರಂ ಕೃಷ್ಣಪ್ಪ ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕೂಡಲೇ ಎಚ್ವೆತ್ತುಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಚೇರಿಯಲ್ಲಿದ್ದ ಸಿಬ್ಬಂದಿಗಳನ್ನು ಹೊರಕ್ಕೆ ಕಳುಹಿಸಿ ತಪಾಸಣೆ ನಡೆಸುತ್ತಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ  ಜಂಟಿ ಆಯುಕ್ತ ಮಂಜುನಾಥ್ ಮಾತನಾಡಿ, ನಮ್ಮ ಕಚೇರಿಗೆ ಬೆದರಿಕೆ ಕರೆ ಬಂದಿಲ್ಲ,  ಬಾಂಬ್ ಇದೆ ಎಂದು ಪೊಲೀಸರು ಬಂದು ಬೆಳಿಗ್ಗೆ  11.30 ಗಂಟೆ ವೇಳೆಗೆ ತಿಳಿಸಿದರು. ಮೀಟಿಂಗ್ ನಲ್ಲಿದ್ದ ನಾವು ಕಚೇರಿಯಿಂದ  ಹೊರಬಂದಿದ್ದೇವೆ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಪ್ರದೀಪ್ ಗಂಟಿ , ಅನಾಮಧೇಯ ವ್ಯಕ್ತಿ ಯೊಬ್ಬರು ಜಿಎಸ್ ಟಿ ಕಚೇರಿಯ ಗೇಟ್ ಬಳಿ ಬಿಳಿ ಹಾಳೆಯಲ್ಲಿ ಟೈಪ್ ಮಾಡಿ ಬಾಂಬ್ ಇಟ್ಟಿರುವುದಾಗಿ ಎಸೆದು ಹೋಗಿದ್ದಾರೆ. ನಾವು ಮಿದಲ ಹಂತದ ತಪಾಸಣೆ ನಡೆಸಲಾಗಿದ್ದು, ಇದೊಂದು ಹುಸಿ ಎಂದು ತಿಳಿದು ಬಂದಿದ್ದು, ಮತ್ತೊಂದು ಹಂತದ ತಪಾಸಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News